IMG-20260227-WA0064-1024x771.jpg
Spread the love

ಹೂಡೆ: ದಿನಾಂಕ:27-02-2026(ಹಾಯ್ ಉಡುಪಿ ನ್ಯೂಸ್) ಸಮುದ್ರದ ಸಮೀಪವಿರುವ ಖಾಸಗಿ ಗೆಸ್ಟ್ ಹೌಸ್ ಒಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ.

ಗೆಸ್ಟ್ ಹೌಸ್ ಒಳಗಡೆ ಎಸಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಅಗ್ನಿ ಶಾಮಕ ದಳದ ವಾಹನ ಮೂಲಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯಲ್ಲಿ ಗೆಸ್ಟ್ ಹೌಸ್ ಒಳಗಿನ ಕೆಲವೊಂದು ವಸ್ತುಗಳು ಸಂಪೂರ್ಣ ಸುಟ್ಟು ಹೋಗಿದೆ.

ಸ್ಥಳೀಯರ ಮಾಹಿತಿಯ ಪ್ರಕಾರ ಅತಿಥಿಗಳು ಗೆಸ್ಟ್ ಹೌಸ್ ನಲ್ಲಿದ್ದರು. ಆದರೆ ಅವರು ಸುತ್ತಾಡಲು ಹೊರಗೆ ಹೋಗಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವಘಡದಲ್ಲಿ ಎಸಿ ಸಂಪೂರ್ಣವಾಗಿ ಭಸ್ಮವಾಗಿದ್ದು, ಗೆಸ್ಟ್ ಹೌಸ್ ಒಳಗೆ ಬೆಂಕಿಯಿಂದಾಗಿ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.

error: No Copying!