istockphoto-523694708-612x612.jpg
Spread the love

ಕುಂದಾಪುರ: ದಿನಾಂಕ:27-02-2026 (ಹಾಯ್ ಉಡುಪಿ ನ್ಯೂಸ್) ವಕ್ವಾಡಿ ಗ್ರಾಮದ ನಿವಾಸಿ ಶ್ವೇತಾ ಎಂಬವರಿಗೆ ಅವರ ಗಂಡನ ಅಕ್ಕ ಹಾಗೂ ಇನ್ನಿತರರು ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಕುಂದಾಪುರ, ವಕ್ವಾಡಿ ಗ್ರಾಮದ ನಿವಾಸಿ ಶ್ವೇತಾ (26), ಎಂಬವರು ಪರಿಶಿಷ್ಟ ಜಾತಿಯ ಆದಿ ದ್ರಾವಿಡ ಜನಾಂಗಕ್ಕೆ ಸೇರಿದವರಾಗಿದ್ದು, ಅವರ ಗಂಡ ಮಲ್ಲೇಶರು ಬಿಲ್ಲವ ಸಮುದಾಯಕ್ಕೆ ಸೇರಿದ್ದು 10 ವರ್ಷದ ಹಿಂದೆ ಮಲ್ಲೇಶ ರವರನ್ನು ಶ್ವೇತಾ ಪ್ರೀತಿಸಿ ಮದುವೆಯಾಗಿದ್ದು ಅವರಿಗೆ 6 ವರ್ಷದ ಮಗು ಇರುತ್ತದೆ.

ದಿನಾಂಕ: 24/02/2026 ರಂದು ರಾತ್ರಿ 10:00 ಗಂಟೆಯ ಸಮಯಕ್ಕೆ ಶ್ವೇತಾ ರವರ ಗಂಡನ ಮೊಬೈಲ್ ನಿಂದ ಗಂಡನ ಅಕ್ಕ ಭಾರತಿ ಶ್ವೇತಾರವರಿಗೆ ಪೋನ್ ಮಾಡಿ ಅವಾಚ್ಯವಾಗಿ ಬೈದು ಪೋನ್ ಕಟ್ಟ್ ಮಾಡಿರುತ್ತಾರೆ. ಪುನ: ರಾತ್ರಿ 10:30 ಗಂಟೆಯ ಸಮಯಕ್ಕೆ ಶ್ವೇತಾ ರವರ ಗಂಡ ಮಲ್ಲೇಶ, ಅವನ ಅಕ್ಕ ಭಾರತಿ ಹಾಗೂ ಶಶಿ ಇವರು ಏಕಾಏಕಿಯಾಗಿ ಶ್ವೇತಾ ರವರ ಮನೆಗೆ ಆಕ್ರಮ ಪ್ರವೇಶ ಮಾಡಿ ಶ್ವೇತಾರವರಿಗೆ ಹಲ್ಲೆ ಮಾಡಿದ್ದು ಆಗ ಶ್ವೇತಾ ರವರ ತಂಗಿ ಸಂಗೀತಾ ತಡೆದಿರುತ್ತಾರೆ. ನಂತರ ಮನೆಯಿಂದ ಹೋಗುವಾಗ ಶಶಿ ಹಾಗೂ ಭಾರತಿ ಬೆದರಿಕೆ ಹಾಕಿದ್ದಾರೆ ಎಂದು ಶ್ವೇತಾ ರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಶ್ವೇತಾ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ: 329(4), 115(2), 118(1), 352, 351 (2), ಜೊತೆಗೆ 3(5) BNS ಮತ್ತು 3(2), (v-a) SC/ST Act ರಂತೆ ಪ್ರಕರಣ ದಾಖಲಾಗಿದೆ.

error: No Copying!