kaup_1772166024.jpg
Spread the love

ಕಾಪು: ದಿನಾಂಕ 27-02-2026(ಹಾಯ್ ಉಡುಪಿ ನ್ಯೂಸ್) ಮಲ್ಲಾರು ಗ್ರಾಮದ ನಿವಾಸಿ ಮಣಿಕಂಠ ಎಂಬವರು ಕಾಣೆಯಾಗಿದ್ದಾರೆ ಎಂದು ಕಾಪು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಪು,ಮಲ್ಲಾರು ಗ್ರಾಮದ ನಿವಾಸಿ ಪವಿತ್ರ ಶೆಟ್ಟಿ (33) ಎಂಬವರ ಗಂಡ ಮಣಿಕಂಠ (36) ಎಂಬವರಿಗೆ ದಿನಾಂಕ:24-02-2026 ರಂದು ರಾತ್ರಿ ಮಲ್ಲಾರು ಗ್ರಾಮದ ನಿವಾಸಿ ಜಾಕೀರ್ ಎಂಬುವವರು ಕರೆ ಮಾಡಿ ಬಾಡಿಗೆ ಇದೆ ಮಂಗಳೂರಿಗೆ ಹೋಗುವ ಎಂಬುದಾಗಿ ತಿಳಿಸಿದಂತೆ ಮಣಿಕಂಠ ರವರು ಪವಿತ್ರ ಶೆಟ್ಟಿ ರವರ ಅಕ್ಕನ KA-19-MR-5180 ನೇ ಗ್ಲಾಂಜಾ ಕಾರ್ ನಲ್ಲಿ ಹೋಗಿದ್ದು, ಅದೇ ದಿನ ರಾತ್ರಿ 11:15 ಗಂಟೆಗೆ ಪವಿತ್ರ ಶೆಟ್ಟಿ ರವರು ಮಣಿಕಂಠ ರವರಿಗೆ ಕರೆ ಮಾಡಿದಾಗ ಮಂಗಳೂರಿಗೆ ಬಾಡಿಗೆ ಇದೆ ನಾನು ಜಾಕೀರ್ ನೊಂದಿಗೆ ಹೋಗುತ್ತಿದ್ದೇನೆ, ನಾನು ಬರುವಾಗ ತಡವಾಗುತ್ತದೆ ಎಂಬುದಾಗಿ ತಿಳಿಸಿರುತ್ತಾರೆ.

ನಂತರ ಮರುದಿನ ಪವಿತ್ರ ಶೆಟ್ಟಿ ರವರು ಮಣಿಕಂಠರವರಿಗೆ ಕರೆ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿರುತ್ತದೆ. ನಂತರ ಜಾಕೀರ್ ರವರ ಬಾವ ಜಿಯಾವುದ್ದೀನ್ ರವರಿಗೆ ಕರೆ ಮಾಡಿ ವಿಚಾರಿಸಿದ್ದು ಜಾಕೀರ್ ರವರು ಮನೆಗೆ ಬಂದಿರುವುದಿಲ್ಲವಾಗಿ ತಿಳಿಸಿರುತ್ತಾರೆ. ನಂತರ ಉಚ್ಚಿಲ, ಪಡುಬಿದ್ರಿ ಕಡೆಗಳಲ್ಲಿ ಮಣಿಕಂಠ ಹಾಗೂ ಕಾರನ್ನು ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಎಂದು ಪವಿತ್ರ ಶೆಟ್ಟಿ ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ  ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!