ಬೈಂದೂರು: ಮೇ೬(ಹಾಯ್ ಉಡುಪಿ ನ್ಯೂಸ್) ಕುಡುಕ ಅಳಿಯನೋರ್ವ ವಯೋವೃದ್ಧ ಅಂಗವಿಕಲ ಅತ್ತೆಗೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಬೈಂದೂರು ತಾಲೂಕು,ತಾರಾಪತಿ ಪಡುವರಿ ಗ್ರಾಮ ,ಅಳುವೆ ಕೋಡಿ, ಕಾಂಜಿಮನೆ ನಿವಾಸಿ ಮಾಚಿ ಖಾರ್ವಿ(೬೫) ಇವರು ಅಂಗವಿಕಲೆಯಾಗಿದ್ದು, ಪಡುವರಿ ಗ್ರಾಮದ ಕಾಂಜಿ ಮನೆ, ತಾರಾಪತಿ, ಅಳುವೆ ಕೋಡಿ, ಎಂಬಲ್ಲಿ ಮಗಳು ಲಕ್ಷ್ಮಿ ಯೊಂದಿಗೆ ವಾಸ್ತವ್ಯ ಮಾಡಿ ಕೊಂಡಿದ್ದು, ಮಗಳು ಲಕ್ಷಿಯನ್ನು ಗಂಗಾದರ ಎಂಬುವವನಿಗೆ ಮದುವೆ ಮಾಡಿಕೊಟ್ಟಿದ್ದು, ಮಾಚಿ ಖಾರ್ವಿ ಮಗಳನ್ನು ಅಳಿಯ ಗಂಗಾಧರ ಚೆನ್ನಾಗಿ ನೋಡಿಕೊಳ್ಳದ ಕಾರಣದಿಂದ ಮಗಳು ಮಾಚಿ ಖಾರ್ವಿ ಯವರ ಜೊತೆಯಲ್ಲಿ ವಾಸ ಮಾಡಿಕೊಂಡಿದ್ದು, , ದಿನಾಂಕ 04/05/2022 ರಂದು ಮದ್ಯಾಹ್ನ 01:45 ಗಂಟೆಗೆ ಗಂಗಾಧರ ಮದ್ಯಪಾನ ಮಾಡಿ ಕೊಂಡು ಮಾಚಿ ಖಾರ್ವಿ ಯವರ ಮನೆಯ ಒಳಗೆ ಬಂದು ಅವಾಚ್ಯ ಶಬ್ದಗಳಿಂದ ಬೈದಾಗ ಮಾತಿಗೆ ಮಾತಾಗಿ ಗಂಗಾಧರ ಹೊಡೆಯಲು ಬಂದಾಗ ಮಗಳು ಲಕ್ಷ್ಮಿ ಹೊಡೆಯುವುದನ್ನು ತಪ್ಪಿಸಲು ಬಂದಾಗ ಗಲಾಟೆ ಬಿಡಿಸಲು ಬಂದ ಲಕ್ಷ್ಮಿಗೆ ಗಂಗಾಧರ ಕೈಯಿಂದ ಹೊಡೆದು, ಮಾಚಿ ಖಾರ್ವಿ ಯವರಿಗೆ ಗಂಗಾಧರನು ಒಣಗಿದ ತೆಂಗಿನ ಬೊಂಡದಿಂದ ಹೊಡೆದು ಬಿಸಾಡಿದ ಪರಿಣಾಮ ಮಾಚಿ ಖಾರ್ವಿ ಯವರ ಎದೆಯ ಎಡಭಾಗದಲ್ಲಿ ನೋವಾಗಿ ರಕ್ತಹೆಪ್ಪು ಗಟ್ಟಿರುತ್ತದೆ. ಗಲಾಟೆಯ ಬೊಬ್ಬೆ ಕೇಳಿ ನೆರೆಕೆರೆಯವರು ಬರುವುದನ್ನು ಕಂಡ ಕುಡುಕ ಗಂಗಾಧರನು ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ ಎಂದು ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದು ಕೊಂಡು ಹೋಗಿದ್ದು ಅಲ್ಲಿ ವೈದ್ಯಾಧಿಕಾರಿಯವರು ಪರೀಕ್ಷೀಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ .ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ