ಮಲ್ಪೆ: ಮೇ ೬(ಹಾಯ್ ಉಡುಪಿ ನ್ಯೂಸ್) ಮೀನಿನ ವ್ಯಾಪಾರಸ್ಥರೋರ್ವರಿಂದ ಮೀನು ಪಡೆದು ಹಣ ನೀಡದೆ ವಂಚಿಸಿದ ಘಟನೆ ನಡೆದಿದೆ.
ಉಡುಪಿ ತಾಲೂಕು ,ನೇಜಾರು,ಕೆಳಾರ್ಕಳಬೆಟ್ಟು, ಜ್ಯೋತಿ ನಗರದ ನಿವಾಸಿ ಶಂಶೀರ್ ಅಲಿ (೪೯)ಇವರು ಮಲ್ಪೆಯಲ್ಲಿ ಉ.ಎಫ್. ಎಮ್ ಎಂಬ ಸಂಸ್ಥೆಯಿಟ್ಟುಕೊಂಡು ಮೀನು ವ್ಯಾಪಾರವನ್ನು ಮಾಡುತ್ತಿದ್ದು , ಇವರಿಗೆ ಮತೀನ್ ಶೇಖ್ ಎಂಬವನ ಪರಿಚಯವಾಗಿದ್ದು. ಶಂಶೀರ್ ಅಲಿ ಒಂದು ವರ್ಷ ಮೂರು ತಿಂಗಳ ಹಿಂದೆ ಗೋವಾದ ಪಿಂಟೋಸ್ ಎಂಬ ಮೀನಿನ ಫ್ಯಾಕ್ಟರಿಗೆ ಮಲ್ಪೆಯಿಂದ ಮೀನನ್ನು ಕಳುಹಿಸುತ್ತಿದ್ದು , ಮತೀನ್ ಶೇಖ್ ಉಡುಪಿಯ ಲೆಗಾಡೋ ಹೋಟೆಲ್ ನಲ್ಲಿ ವ್ಯಾಪಾರದ ಬಗ್ಗೆ ಮೀಟಿಂಗ್ ಮಾಡಿದ್ದು, ಮೀಟಿಂಗ್ ನಲ್ಲಿ ಮತೀನ್ ಶೇಖ್, ಸುಲೇಮಾನ್ ಗ್ಯಾಬ್ರಿಯಲ್ ಪಿಂಟೋ ಮತ್ತು ಇನ್ನೊಬ್ಬ ವ್ಯಕ್ತಿಯು ಶಂಶೀರ್ ಅಲಿಯವರಲ್ಲಿ ಮೀನನ್ನು ಗೋವಾದ ಫ್ಯಾಕ್ಟರಿಗೆ ಕಳುಹಿಸುವಂತೆ ವ್ಯವಹಾರದ ಮಾತುಕತೆ ಯಾಗಿದ್ದು ಅದರಂತೆ ಶಂಶೀರ್ ಅಲಿ ಮೀನನ್ನು ಗೋವಾಕ್ಕೆ ಕಳುಹಿಸುತ್ತಿದ್ದು . ಮತೀನ್ ಶೇಖ್ ಮೀನಿನ ಹಣ ಕೊಡಲು ಬಾಕಿಯಿದ್ದು ಶಂಶೀರ್ ಅಲಿ ಕೇಳಿದಾಗ ಕರೋನದಿಂದ ವ್ಯವಹಾರ ಕುಂಠಿತವಾಗಿದ್ದು ಬಾಕಿ ಇದ್ದ ಹಣವನ್ನು ನೀಡುವುದಾಗಿ ಮತೀನ್ ಶೇಖ್ ತಿಳಿಸಿದ್ದು , ಹಣ ನೀಡದ ಕಾರಣ ಶಂಶೀರ್ ಅಲಿ ಮೀನನ್ನು ಕಳುಹಿಸಿರುವುದಿಲ್ಲ, ದಿನಾಂಕ 17/11/2021 ರಂದು ಶಂಶೀರ್ ಅಲಿ ಮತ್ತು ಮ್ಯಾನೇಜರ್ ಅಬ್ದುಲ್ ರಜಾಕ್ ಹಾಗೂ ಇನ್ನಿಬ್ಬರು ಸೇರಿ ಗೋವಾ ಫ್ಯಾಕ್ಟರಿಗೆ ಹೋಗಿ ಹಣದ ಬಗ್ಗೆ ಕೇಳಿದಾಗ ಸರಿಯಾಗಿ ಉತ್ತರವನ್ನು ನೀಡಿರುವುದಿಲ್ಲ ಎಂದಿದ್ದಾರೆ.ಮ್ಯಾನೇಜರ್ ಮತೀನ್ ಶೇಖ್ ಗೆ ಕರೆ ಮಾಡಿ ಹಣವನ್ನು ಕೇಳಿದಾಗ ನಾನು ಕಂಪೆನಿಯನ್ನು ಬಿಟ್ಟಿರುತ್ತೇನೆ , ಏನೂ ಬೇಕಾದ್ರೂ ಮಾಡು ಎಂದು ಅವಾಚ್ಯ ಶಬ್ದಗಳಿಂದ ಬೈದು, ನಿನ್ನ ಕೈಕಾಲು ಕಡಿದು ಹಾಕುವುದಾಗಿ ಬೆದರಿಕೆ ಹಾಕಿರುತ್ತಾನೆ ಎಂದು ಶಂಶೀರ್ ಅಲಿ ದೂರಿದ್ದಾರೆ. .ಶಂಶೀರ್ ಅಲಿ ಯವರಿಗೆ ಮೋಸ ಮಾಡುವ ಉದ್ದೇಶದಿಂದ ಮೀನು ಪಡೆದು ಹಣ ನೀಡದೆ ನಂಬಿಕೆ ದ್ರೋಹ ಮಾಡಿ ,ಮೋಸ ಮಾಡಿ ನಷ್ಟ ಉಂಟು ಮಾಡಿರುತ್ತಾರೆ ಎಂದು ನ್ಯಾಯಾಲಯದಲ್ಲಿ ನೀಡಿರುವ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.