images-1.jpeg
Spread the love

ಮಲ್ಪೆ: ದಿನಾಂಕ:20-02-2026(ಹಾಯ್ ಉಡುಪಿ ನ್ಯೂಸ್) ಮಲ್ಪೆ ಬಂದರಿನಲ್ಲಿ ಕೆಲಸಕ್ಕೆ ತೆರಳಿದ್ದ ವ್ಯಕ್ತಿ ಯೋರ್ವರ ಮುಖಕ್ಕೆ ಖಾರ ಪುಡಿ ಎರಚಿ ಅವರ ಚಿನ್ನದ ಸರ ಸುಲಿಗೆ ಮಾಡಿದ ಘಟನೆ ಇಂದು ಮುಂಜಾನೆ ನಡೆದಿದೆ.

ಮಲ್ಪೆ ಬಡಾನಿಡಿಯೂರು ಗ್ರಾಮದ ನಿವಾಸಿ ದಯಾನಂದ ಕುಂದರ್‌ (61) ಎಂಬವರು ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ 20/02/2026 ರಂದು ಬೆಳಿಗ್ಗೆ 03:00 ಗಂಟೆಗೆ ಮಲ್ಪೆ ಬಂದರಿಗೆ ಕೆಲಸಕ್ಕೆ ಹೋಗಿದ್ದು, ಬೆಳಿಗ್ಗೆ 04:30 ಗಂಟೆಗೆ ಶೌಚಾಲಯಕ್ಕೆ ಹೋಗುವ ಸಲುವಾಗಿ ಮಲ್ಪೆ ಬಂದರಿನ ಸಾಹುಕಾರ್‌ ಬಾರ್‌ ಬಳಿ ಇರುವ ಆಫೀಸ್‌ನಲ್ಲಿ ಶೌಚಾಲಯಕ್ಕೆ ಹೋಗಿ ವಾಪಾಸು ಬಂದರು ಕಡೆಗೆ ಹೊರಟಾಗ ಬೆಳಿಗ್ಗೆ 04:40 ಗಂಟೆ ಸುಮಾರಿಗೆ ಓರ್ವ ಆರೋಪಿತನು ದಯಾನಂದ ಕುಂದರ್ ರವರಲ್ಲಿ ಮೀನಿನ ಬಗ್ಗೆ ವಿಚಾರಿಸಿ, ಸುಲಿಗೆ ಮಾಡುವ ಉದ್ದೇಶದಿಂದ ದಯಾನಂದ ಕುಂದರ್ ರವರ ಮುಖಕ್ಕೆ ಖಾರದ ಪುಡಿ ಎರಚಿ, ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿದ್ದು, ನಂತರ ಇನ್ನಿಬ್ಬರು ಆರೋಪಿತರು  ಒಟ್ಟು ಸೇರಿಕೊಂಡು ದಯಾನಂದ ಕುಂದರ್ ರವರಿಗೆ  ಚಾಕು ತೋರಿಸಿ, ದಯಾನಂದ ಕುಂದರ್ ರವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೊಡುವಂತೆ ಕೇಳಿದ್ದು, ದಯಾನಂದ ಕುಂದರ್ ರವರು ಕೊಡದೆ ಇದ್ದಾಗ ಆರೋಪಿತ ಮುತ್ತಣ್ಣ ಎಂಬವ ಮತ್ತು ಇಬ್ಬರು ಅಪರಿಚಿತರು ಸೇರಿ ದಯಾನಂದ ಕುಂದರ್ ಮುಖಕ್ಕೆ ಮತ್ತು ಬೆನ್ನಿಗೆ ಕೈಯಿಂದ ಹಲ್ಲೆ ಮಾಡಿ ಅವರನ್ನು ಎಳೆದಾಡಿ ಅಂದಾಜು 6 ಲಕ್ಷ ಮೌಲ್ಯದ ಸುಮಾರು 6 ಪವನ್‌ ಚಿನ್ನದ ಸರವನ್ನು ಸುಲಿಗೆ ಮಾಡಿದ್ದಲ್ಲದೆ ಘಟನೆಯ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಂದು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದಯಾನಂದ ಕುಂದರ್ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಕಲಂ: 309(6), 351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!