gettyimages-134467466-612x612.jpg
Spread the love

ಬ್ರಹ್ಮಾವರ: ದಿನಾಂಕ:21-02-2026(ಹಾಯ್ ಉಡುಪಿ ನ್ಯೂಸ್) ಮನೆಗೆ ಬಾರದ ಗಂಡನನ್ನು ಮನೆಗೆ ಬರುವಂತೆ ವಿನಂತಿಸಲು ಹೋಗಿದ್ದ ಹೆಂಡತಿಗೆ ಮಾರಕಾಸ್ತ್ರಗಳಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಹೆಂಡತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ರಹ್ಮಾವರ,ವಾರಂಬಳ್ಳಿ ಗ್ರಾಮದ ನಿವಾಸಿ ರಿಹಾನ (40), ಎಂಬವರು ದಿನಾಂಕ 11/06/2023 ರಂದು ಆರೋಪಿತ ಮೊಹಮ್ಮದ್ ಇಕ್ಬಾಲ್ ರವರೊಂದಿಗೆ ಮದುವೆ ಆಗಿ ಪತಿ ಹಾಗೂ ಮಗಳೊಂದಿಗೆ ವಾರಂಬಳ್ಳಿ ಗ್ರಾಮದ ಸ್ವರ್ಣ ರೆಸಿಡೆನ್ಸಿಯಲ್ಲಿ ವಾಸವಾಗಿರುತ್ತಾರೆ.

ಮೊಹಮ್ಮದ್ ಇಕ್ಬಾಲ್ ನು  ರಿಹಾನರೊಂದಿಗೆ ಮದುವೆ ಆಗಿ ಸುಮಾರು 2 ½ ವರ್ಷಗಳ ನಂತರ ಸರಿಯಾಗಿ ನೋಡಿಕೊಳ್ಳದೇ ಕೈಯಿಂದ ಹೊಡೆದು ಅವಾಚ್ಯವಾಗಿ ಬೈದು ಹಿಂಸೆ ನೀಡಲು ಪ್ರಾರಂಭಿಸಿದ್ದು, ಈ ಹಿಂದೆ ಮೊಹಮ್ಮದ್ ಇಕ್ಬಾಲ್ ನು  ಮನೆಗೆ ಬಾರದೇ ಇದ್ದಾಗ ದಿನಾಂಕ 08/02/2026 ರಂದು ರಿಹಾನ ಆರೋಪಿಯನ್ನು ಹುಡುಕಿಕೊಂಡು ಅವನು ಕೆಲಸ ಮಾಡುತ್ತಿದ್ದ ವಾರಂಬಳ್ಳಿ ಗ್ರಾಮದ ಧರ್ಮಾವರಂ ಬಳಿ ಇದ್ದ ಅವರ ಗ್ಯಾರೇಜ್ ನಲ್ಲಿ ಹೋಗಿ ವಿಚಾರಿಸಿದಾಗ ಸ್ಥಳದಲ್ಲಿ ತಾನು ಮನೆಗೆ ಬರುವುದಿಲ್ಲವೆಂದು ಹೇಳಿ ಆರೋಪಿಯು ಗಲಾಟೆ ಮಾಡಿದ್ದಲ್ಲದೇ, ಸಂಜೆ ಆರೋಪಿಯು ಮನೆಗೆ ಬಂದು ರಿಹಾನ ರನ್ನು ಉದ್ದೇಶಿಸಿ ಗ್ಯಾರೇಜ್‌ ಗೆ ಯಾಕೆ ಬಂದಿದ್ದು ಎಂದು ಹೇಳಿ ಅವರಿಗೆ ಕೈಯಿಂದ ಹೊಡೆದಿರುತ್ತಾರೆ.

ಈ ಹಿಂದಿನಂತೆ ಆರೋಪಿ ಮೊಹಮ್ಮದ್ ಇಕ್ಬಾಲ್ ನು 4 ದಿನದಿಂದ ಮನೆಗೆ ಬಾರದೆ ಇದ್ದಾಗ  ದಿನಾಂಕ 19/02/2026 ರಂದು ಬೆಳಿಗ್ಗೆ ರಿಹಾನರವರು  ಗಂಡನನ್ನು ನೋಡಿಕೊಂಡು ಬರಲು ಅವರ ಗ್ಯಾರೇಜ್ಗೆ ಹೋಗಿ, ಮನೆಗೆ ಬನ್ನಿ ಎಂದು ಕೇಳಿಕೊಂಡಾಗ ನೀನು ನನಗೆ ಬೇಡ ನಿನ್ನೊಂದಿಗೆ ಸಂಸಾರ ಮಾಡುವುದಿಲ್ಲ. ನನಗೆ ಮೊದಲನೇ ಹೆಂಡತಿ ಬೇಕು ನೀನು ನನ್ನನ್ನು ಬಿಟ್ಟು ಬೇರೆ ಮದುವೆ ಮಾಡಿಕೊ ಎಂದು ಹೇಳಿದ್ದು, ಆಗ ರಿಹಾನರವರು ಸಂಸಾರ ಮಾಡುವುದಾದರೆ ನಿಮ್ಮೊಂದಿಗೆ ಎಂದು ಹೇಳಿದ್ದಕ್ಕೆ ಆರೋಪಿ ಮೊಹಮ್ಮದ್ ಇಕ್ಬಾಲ್ ನು  ಕಲ್ಲಿನಿಂದ ಹಣೆಗೆ ಹೊಡೆದು ನಂತರ ಅಲ್ಲಿದ್ದ ಒಂದು ರಾಡ್‌ ನಿಂದ ರಿಹಾನರವರ ಮೈಕೈಗೆ ಹಾಗೂ ತಲೆಗೆ ಹೊಡೆದು ಹೊಟ್ಟೆಗೆ ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿರುತ್ತಾರೆ.

ಹಲ್ಲೆ ಯಿಂದ ಗಾಯಗೊಂಡ ರಿಹಾನರವರು ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ರಿಹಾನರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 85, 115(2), 118(1), 352, 351(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!