Spread the love

ಬೈಂದೂರು: ಮೇ ೬(ಹಾಯ್ ಉಡುಪಿ ನ್ಯೂಸ್) ಜಾಗ ಮಾರಾಟದ ಒಪ್ಪಂದಕ್ಕೆ ಸಹಿ ಮಾಡಿ ನಂತರ ವಂಚಿಸಿ, ದಾಖಲೆಗಳ ಕಳ್ಳತನ ನಡೆಸಿದ ಘಟನೆ ನಡೆದಿದೆ.

ಕುಂದಾಪುರ ತಾಲೂಕು ,ಹಾರ್ದಳ್ಳಿ-ಮಂಡಳ್ಳಿ ಗ್ರಾಮ, ಜನ್ನಾಡಿಮನೆ ನಿವಾಸಿ ನವೀನ ಕಂದಾವರ ಇವರು ಕಿದಿಜೆ ವಸಂತಿ ಹೆಗ್ಡೆ ರವರಿಗೆ ಸಂಬಂಧಿಸಿದ ಬ್ರಹ್ಮಾವರ ತಾಲೂಕು 52 ನೇ ಹೇರೂರು ಗ್ರಾಮದ ಸ. ನಂ 162-03 ರಲ್ಲಿ 5.03 ಎಕ್ರೆ ಹಾಗೂ ಸ.ನಂ 19-30 ರಲ್ಲಿ 0.65 ಎಕ್ರೆ , ಸ.ನಂ 19 ರಲ್ಲಿ 0.51 ಎಕ್ರೆ, 0.10 ಎಕ್ರೆ , 0.05 ಎಕ್ರೆ ( ಒಟ್ಟು 6.34 ಎಕ್ರೆ) ಜಾಗವನ್ನು ಖರೀದಿಸುವ ಬಗ್ಗೆ ರೀಯಲ್ ಎಸ್ಟೇಟ್ ಬ್ರೋಕರ್ ಆದ ಕೆ ಹರಿಪ್ರಸಾದ ಶೆಟ್ಟಿ ಮುಖಾಂತರ ಕರಾರು ಪತ್ರ ಮಾಡಿಸಿಕೊಂಡಿದ್ದು,  ಕರಾರು ಪತ್ರಗಳು ಹಾಗೂ ಇತರ ಜಾಗದ ದಾಖಲೆಗಳು, ನವೀನ್ ಕಂದಾವರ ಕೆಲಸ ಮಾಡುತ್ತಿರುವ ಜಾಗದ ಎಸ್ಟಿಮೇಟ್ ಗಳು, ಬ್ಯಾಂಕ್ ನ ಚೆಕ್ ಪುಸ್ತಕಗಳು, ಸಹಿ ಮಾಡಿರುವ ಚೆಕ್ ಹಾಳೆಗಳು 2 ಹಳೆಯ ಮೊಬೈಲ್ ಪೋನ್ ಗಳನ್ನು ಕೆಂಪು ಬಣ್ಣದ ಹ್ಯಾಂಡ್ ಬ್ಯಾಗ್ ನಲ್ಲಿ ಹಾಕಿ ನವೀನ ಕಂದಾವರ ವಾಸವಿದ್ದ ಬೈಂದೂರು ತಾಲೂಕು ಶಿರೂರು ಗ್ರಾಮದ ನಡಹಿತ್ಲು ದೊಂಬೆ ರಸ್ತೆಯಲ್ಲಿರುವ ಕೆ ಹರಿಪ್ರಸಾದ ಶೆಟ್ಟಿ ರವರ ಗೆಸ್ಟ್ ಹೌಸ್ ರೂಂ ನಲ್ಲಿ ಇಟ್ಟು ಬೀಗ ಹಾಕಿರುತ್ತಾರೆ ಎಂದಿದ್ದಾರೆ.. ನಂತರ ಜಾಗದ ರಿಜಿಸ್ಟರ್ ವಿಚಾರದಲ್ಲಿ 1. ಕೆ ಹರಿಪ್ರಸಾದ ಶೆಟ್ಟಿ ,2. ಕಿದಿಜೆ ವಸಂತಿ ಶೆಟ್ಟಿ , 3. ತಾರನಾಥ ಶೆಟ್ಟಿ, 4. ರೇಖಾ ತಾರನಾಥ ಶೆಟ್ಟಿ, 5, ಅನೀಶ್ ಮ್ಯಾಥೀವ್ ಇವರು  ಜಾಗವನ್ನು ರಿಜಿಸ್ಟರ್ ಮಾಡಿಕೊಡಲು ತಕರಾರು ಮಾಡಿದ್ದು, ದಿನಾಂಕ 21/02/2022 ರಂದು ಬೆಳಿಗ್ಗೆ 9:00 ಗಂಟೆಗೆ ನವೀನ್ ಕಂದಾವರ ರವರು ಗೆಸ್ಟ್ ಹೌಸ್ ನ ರೂಂನ ಬಳಿ ಹೋದಾಗ ಕೆಲಸದವರು ಮೈನ್ ಡೋರ್ ತೆರೆಯದೇ ಇದ್ದು ಕಿಟಕಿ ಮೂಲಕ ನೋಡಿದಾಗ ನವೀನ್ ಕಂದಾವರರವರ ರೂಂ ತೆರೆದಿದ್ದು, ದಾಖಲೆ ಪತ್ರಗಳಿದ್ದ ಕೆಂಪು ಬಣ್ಣದ ಬ್ಯಾಗ್ ಇರದೇ ಇದ್ದು, ಕೆ.ಹರಿಪ್ರಸಾದ್ ಶೆಟ್ಟಿ ಹಾಗೂ ಇತರರು ಕರಾರು ಪತ್ರ ಮಾಡಿಕೊಂಡ ಕಿದಿಜೆ ವಸಂತಿ ಹೆಗ್ಡೆ ರವರ ಜಾಗವನ್ನು ನವೀನ್ ಕಂದಾವರ ರವರಿಗೆ ರಿಜಿಸ್ಟರ್ ಮಾಡಿಕೊಡದೇ  ವಂಚನೆ ಮಾಡುವ ಉದ್ದೇಶದಿಂದ ಅನಿಶ್ ಮ್ಯಾಥ್ಯು ಮುಖಾಂತರ ದಿನಾಂಕ 10/01/2022 ರಿಂದ ದಿನಾಂಕ 21/02/2022 ರ ಮಧ್ಯಾವಧಿಯಲ್ಲಿ ನವೀನ್ ಕಂದಾವರ ವಾಸವಿದ್ದ ಗೆಸ್ಟ್ ಹೌಸ್ ರೂಂ ನ ಬಾಗಿಲ ಬೀಗವನ್ನು ಮುರಿದು ಒಳಗಡೆ ಇರಿಸಿದ್ದ  ದಾಖಲೆಗಳು, ಚೆಕ್ ಪುಸ್ತಕ ಹಾಗೂ ಚೆಕ್ ಹಾಳೆ. 2 ಮೊಬೈಲ್ ಗಳಿದ್ದ ಬ್ಯಾಗ್ ನ್ನು ಕಳವು ಮಾಡಿಸಿರುವುದಾಗಿ ದೂರು ನೀಡಿದ್ದು ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  

error: No Copying!