images-19.jpeg
Spread the love

ಶಿರ್ವ: ದಿನಾಂಕ:17-02-2026 (ಹಾಯ್ ಉಡುಪಿ ನ್ಯೂಸ್)ಕುರ್ಕಾಲು ಗ್ರಾಮದ ಕುಲೇದು ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಶಿರ್ವ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಮರಬದ ಅವರು ದಾಳಿ ನಡೆಸಿ 13 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿರ್ವ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಮರಬದ ಅವರಿಗೆ ದಿನಾಂಕ:15.02.2026 ರಂದು ಕಾಪು ತಾಲೂಕು ಕುರ್ಕಾಲು ಗ್ರಾಮದ ಕುಲೇದು ಎಂಬಲ್ಲಿ ಸುಮಾರು 10-15 ಜನ ಸೇರಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಕೋಳಿ ಹುಂಜಗಳ ಕಾಲುಗಳಿಗೆ ಹರಿತವಾದ ಕೋಳಿ ಬಾಳ್ ನ್ನು ಕಟ್ಟಿ ಒಂದಕ್ಕೊಂದು ತಿವಿದುಕೊಳ್ಳುವಂತೆ ಮಾಡಿ ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕವನ್ನು ನಡೆಸುತ್ತಿದ್ದಾರೆ  ಎಂಬುದಾಗಿ ಖಚಿತ ಮಾಹಿತಿ ಸಾರ್ವಜನಿಕರು ನೀಡಿದಂತೆ ಠಾಣಾ ಸಿಬ್ಬಂದಿಗಳೊಂದಿಗೆ ಕುರ್ಕಾಲು ಗ್ರಾಮದ ಕುಲೇದು ಎಂಬಲ್ಲಿಗೆ ತಲುಪಿದಾಗ ಅಲ್ಲಿ ಸುಮಾರು 20 ಜನ ಹಣವನ್ನು ಪಣವನ್ನಾಗಿಟ್ಟು ಕೋಳಿ ಅಂಕ ಆಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದ್ದು ದಾಳಿಯ ಸಂದರ್ಭ ಸಮವಸ್ತ್ರದಲ್ಲಿದ್ದ ಪೊಲೀಸರನ್ನು  ನೋಡಿ ಅಲ್ಲಿ ಆಡುತ್ತಿದ್ದ ಎಲ್ಲರೂ ಓಡಿ ಹೋಗಿರುತ್ತಾರೆ.

ಸ್ಥಳದಲ್ಲಿ ಇದ್ದ 10 ದ್ವಿಚಕ್ರ ವಾಹನ 2 ಕಾರುಗಳು 1 ಆಟೋರಿಕ್ಷಾವನ್ನು ಮುಂದಿನ ಕ್ರಮಕ್ಕಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.  20 ಜನ ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಕೋಳಿ ಹುಂಜಗಳ ಕಾಲುಗಳಿಗೆ ಹರಿತವಾದ ಕೋಳಿ ಬಾಳ್ ನ್ನು ಕಟ್ಟಿ ಒಂದಕ್ಕೊಂದು ತಿವಿದುಕೊಳ್ಳುವಂತೆ ಮಾಡಿ ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕವನ್ನು ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ  ಕಲಂ: 87,93 ಕೆ ಪಿ ಕಾಯಿದೆರಂತೆ ಪ್ರಕರಣ ದಾಖಲಾಗಿದೆ.

error: No Copying!