ಉಡುಪಿ: ದಿನಾಂಕ :17-02-2026 (ಹಾಯ್ ಉಡುಪಿ ನ್ಯೂಸ್) ಪ್ಲಿಫ್ ಕಾರ್ಟ್ ಕಸ್ಟಮರ್ ಕೇರ್ ಎಂದು ನಂಬಿಸಿ ಆನ್ ಲೈನ್ ಮೂಲಕ 71 ಸಾವಿರ ರೂಪಾಯಿ ವಂಚಿಸಿದ್ದಾರೆ ಎಂದು ಮನೋಜ್ ನಿಕೋಲಸ್ (64) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಂಬಾಗಿಲು ಕಲ್ಸಂಕ ಮಾಂಡವಿ ಪ್ರಿನ್ಸ್ ಪ್ಯಾಲೇಸ್ ನಿವಾಸಿ ಮನೋಜ್ ಎಂಬವರು ಫ್ಲಿಪ್ ಕಾರ್ಟ್ ನಿಂದ 8 ಬಾಕ್ಸ್ ಬಲ್ಬ್ ಗಳನ್ನು ರೂ 1,517 ಗೆ ಆರ್ಡರ್ ಮಾಡಿದ್ದು, ದಿನಾಂಕ: 09/02/2026 ರಂದು 1 ಬಾಕ್ಸ್ ಮಾತ್ರ ಡೆಲಿವೆರಿ ಆಗಿರುತ್ತದೆ, ಮನೋಜ್ ರವರು ಡೆಲಿವರಿ ಬಾಯ್ ಬಳಿ ಉಳಿದ 7 ಬಾಕ್ಸ್ ಗಳ ಬಗ್ಗೆ ವಿಚಾರಿಸಿದಾಗ ಆತನು ಫ್ಲಿಪ್ ಕಾರ್ಟ್ ಗೆ ದೂರು ಹಾಕುವಂತೆ ಹೇಳಿ ಹೋಗಿರುತ್ತಾನೆ.
ನಂತರ ಮನೋಜ್ ರವರು ಫ್ಲಿಪ್ ಕಾರ್ಟ್ ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದಾಗ ಯಾವುದೇ ಸಂಪರ್ಕ ಆಗದ ಕಾರಣ ,ಗೂಗಲ್ ನಲ್ಲಿ ಫ್ಲಿಪ್ ಕಾರ್ಟ್ ಕಸ್ಟಮರ್ ಕೇರ್ ಎಂಬುದಾಗಿ ಸರ್ಚ್ ಕೊಟ್ಟಾಗ ಒಂದು ನಂಬರ್ ಬಂದಿದ್ದು, ಅದಕ್ಕೆ ಕರೆ ಮಾಡಿದಾಗ ಯಾರೂ ಸಹ ಕರೆ ಸ್ವೀಕರಿಸದೇ ಇದ್ದು, ನಂತರ ಅಲ್ಲಿಂದಲೇ ದೀಪಕ್ ತ್ರಿಪಾಟಿ ಎಂಬವನು ಕರೆ ಮಾಡಿ ಹಿಂದಿಯಲ್ಲಿ ಮನೋಜ್ ರವರೊಂದಿಗೆ ಒಳ್ಳೆಯ ರೀತಿಯಲ್ಲಿ ಮಾತನಾಡಿ ನಂತರ Refund ಹಾಕುವುದಾಗಿ ಹೇಳಿ G̲ pay ಮುಖಾಂತರ rf 99000 ನಂಬರ್ ನಮೂದಿಸಲು ತಿಳಿಸಿರುತ್ತಾರೆ,ಅದರಂತೆ ಮನೋಜ್ ರವರು rf 99000 ನಂಬರ್ ನಮೂದಿಸಿದ ತಕ್ಷಣವೇ ಮನೋಜ್ ರವರ Account ಕರ್ನಾಟಕ ಬ್ಯಾಂಕ್ , ಕುಂಜಿಬೆಟ್ಟು ಬ್ರಾಂಚ್ ಖಾತೆಯಿಂದ 71.035/- ರೂ ಹಣ ಹೋಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ 318(4) BNS 66(D) IT act ರಂತೆ ಪ್ರಕರಣ ದಾಖಲಾಗಿದೆ.
