ದಿನಾಂಕ:16-02-2026(ಹಾಯ್ ಉಡುಪಿ ನ್ಯೂಸ್)
ಉಡುಪಿ: ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ
ಬಂಧಿತ ನನ್ನು ಗುಲ್ವಾಡಿ ಸೌಕೂರು ಆಳ್ವರ ಮನೆಯ ಶಶಾಂಕ್ ಶೆಟ್ಟಿ ಯಾನೆ ಶಶಿಕಿರಣ್ ಯಾನೆ ಕಿರಣ್ ಶೆಟ್ಟಿ ಯಾನೆ ರಾಕೇಶ್ ಯಾನೆ ಶಶಿ (32) ಎಂದು ಗುರುತಿಸಲಾಗಿದೆ.
ಈತನ ವಿರುದ್ಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ 7 ಪ್ರಕರಣ, ಹೆಬ್ರಿ- 1, ಕಲಘಟಕಿ- 1, ಕೋಟ- 1 ಹಾಗೂ ಬೆಂಗಳೂರು ಚಂದ್ರ ಲೇ ಔಟ್-1 ರಂತೆ ಕಳ್ಳತನ, ಸುಲಿಗೆ, ಹನಿಟ್ರಾಪ್ ಗಳಂತಹ ಒಟ್ಟು 11 ಪ್ರಕರಣಗಳು ದಾಖಲಾಗಿವೆ.
ಈತನ ವಿರುದ್ದ ನ್ಯಾಯಾಲಯವು ಈವರೆಗೆ 12 ಬಾರಿ ವಾರೆಂಟ್ ಹೊರಡಿಸಿದ್ದು ಈತ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 4 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಈತನ ಪತ್ತೆಯ ಬಗ್ಗೆ 4 ವರ್ಷಗಳಿಂದ ಪ್ರಯತ್ನಿಸುತ್ತಿದ್ದು ಖಚಿತ ಮಾಹಿತಿಯಂತೆ ಶಶಾಂಕ್ ಶೆಟ್ಟಿಯನ್ನು ಫೆ.15 ರಂದು ಕುಂದಾಪುರ ತಾಲೂಕು ಬಿದ್ಕಲ್ ಕಟ್ಟೆ ಎಂಬಲ್ಲಿ ಬಂದಿಸಲಾಗಿದೆ.
ಕುಂದಾಪುರ ಡಿವೈಎಸ್ಪಿ ಹೆಚ್.ಡಿ ಕುಲಕರ್ಣಿ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ ಎ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ ನಾಸೀರ್ ಹುಸೇನ್ ಹಾಗೂ ಚಂದ್ರಕಲಾ ಮ ಪತ್ತಾರ ಅವರ ನೇತ್ರತ್ವದಲ್ಲಿ ಠಾಣಾ ಸಿಬ್ಬಂದಿ ರಾಜು ಬಿ, ಗುರು ಪ್ರಸಾದ್, ಕಿರಣ್ ಬಿ ಪಾಟೀಲ್ ಹಾಗೂ ಕುಂದಾಪುರ ಠಾಣಾ ಸಿಬಂದಿ ಚಂದ್ರ ಶೆಟ್ಟಿ ಈ ಕಾರ್ಯಾಚರಣೆ ನಡೆಸಿದ್ದಾರೆ.
