ಕುಂದಾಪುರ: ಮೇ ೬(ಹಾಯ್ ಉಡುಪಿ ನ್ಯೂಸ್) ಇಸ್ಪೀಟ್ ಜುಗಾರಿ ಆಡುತ್ತಿದ್ದವರನ್ನು ಪೋಲಿಸರು ದಾಳಿ ನಡೆಸಿ ಬಂಧಿಸಿ ದ ಘಟನೆ ಕುಂದಾಪುರದಲ್ಲಿ ನಡೆದಿದೆ.
ದಿನಾಂಕ 04/05/2022 ರಂದು ಹೆಮ್ಮಾಡಿ ಗ್ರಾಮದ ಲೂಯಿಸ್ ಬಾರಿನ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಜೂಜಾಗಿ ಇಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದಾರೆಂದು ಕುಂದಾಪುರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸದಾಶಿವ ಆರ್ ಗವರೋಜಿರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ಮಾಡಿದಾಗ 3 ಜನ ಓಡಿಹೋಗಿದ್ದು 2 ಜನರನ್ನು ಸಿಬ್ಬಂದಿಗಳ ಸಹಾಯದಿಂದ ಬಂಧಿಸಿ ಅವರ ಹೆಸರು ವಿಳಾಸ ವಿಚಾರಿಸಿದಾಗ 1) ಸಂತೋಷ ದೇವಾಡಿಗ (36), ವಾಸ: ಕೋಟೆಬಾಗಿಲು, ತಲ್ಲೂರು ಗ್ರಾಮ ಕುಂದಾಪುರ ತಾಲೂಕು, 2) ಬಾಬು ಶೆಟ್ಟಿ (46), ವಾಸ : ನೇರಳೆಕಟ್ಟೆ ಬಾಂಡ್ಯ ಪೋಸ್ಟ್ ಕೊಡ್ಲಾಡಿ ಗ್ರಾಮ, ಕುಂದಾಪುರ ತಾಲೂಕು, 3) ಚಂದ್ರ ತಲ್ಲೂರು (55), , ವಾಸ : ಮೊಳಸಾಲ್ ಬೆಟ್ಟು ಉಪ್ಪಿನಕುದ್ರು ಗ್ರಾಮ, ಕುಂದಾಪುರ ತಾಲೂಕು, 4) ದಿನೇಶ್ ಸಿಡಿ (38), ವಾಸ : ಕಟ್ ಬೆಲ್ತೂರು ಹೆಮ್ಮಾಡಿ ಗ್ರಾಮ, ಕುಂದಾಪುರ ತಾಲೂಕು, 5) ಕೋಟಿ ಪೂಜಾರಿ (49), ವಾಸ :ಜಾಡಿ ದೇವಲ್ಕುಂದ ಗ್ರಾಮ, ಕುಂದಾಪುರ ತಾಲೂಕು ಎಂಬುದಾಗಿ ತಿಳಿಸಿದ್ದು, ಅವರಿಂದ ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ರೂಪಾಯಿ 780/, ಹಳೆಯ ದಿನಪತ್ರಿಕೆ-1, ಇಸ್ಪೀಟು ಎಲೆಗಳು-52 ಇವುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.