ದಿನಾಂಕ: 12-01-2026(ಹಾಯ್ ಉಡುಪಿ ನ್ಯೂಸ್)
ಉಡುಪಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಕಾನೂನುಗಳನ್ನು ಹಿಂಪಡೆಯಲು ಹಾಗೂ ಕೇಂದ್ರ ಸರ್ಕಾರದ ಕಾಯ್ದೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿ ಮಾಡದಂತೆ ಆಗ್ರಹಿಸಿ ಉಡುಪಿಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರ 44 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿರುವುದು ಬಂಡವಾಳಗಾರರಿಗೆ ಭಾರೀ ಲಾಭ ಮಾಡಿ ದುಡಿಯುವ ವರ್ಗದ ಜನರಿಗೆ ಮಾಡಿದ ಮಹಾಮೋಸ ಮಾಡುವಂತದ್ದಾಗಿದೆ. ಅಲ್ಲದೇ ಕಾರ್ಪೋರೇಟ್ ಕಂಪೆನಿಗಳಲ್ಲಿ ಇತ್ತೀಚೆಗೆ ದುಡಿಯುತ್ತಿರುವ ಯುವಜನರಿಗೂ ಭವಿಷ್ಯದಲ್ಲಿ ಅಭದ್ರತೆ ಕಾಡಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಖಾಸಗೀಕರಣದ ಭಾಗವಾಗಿ ತಂದಿರುವ ವಿದ್ಯುತ್ ಕಾಯ್ದೆ -2025 ಅನುದಾನ ಕಡಿತ ಮಾಡಿ ಉದ್ಯೋಗ ಖಾತ್ರಿ ಯೋಜನೆಯನ್ನು ಹಳ್ಳ ಹಿಡಿಸುವ ಯೋಜನೆ ವಿರುದ್ಧ ಕಾರ್ಖಾನೆ ಕಾಯ್ದೆ ತಿದ್ದುಪಡಿ ವಿರುದ್ಧ,ಕಟ್ಟಡ ಕಾರ್ಮಿಕರ ಕಲ್ಯಾಣ ಕಾಯ್ದೆ ರದ್ದತಿ ವಿರುದ್ಧ, ಆಟೋರಿಕ್ಷಾ ಮತ್ತು ವಾಹನ ಚಾಲಕರ ಬೇಡಿಕೆಗಳಿಗಾಗಿ ಬೀಜ ಮಸೂದೆ ಕಾಯ್ದೆ ವಿರುದ್ಧ, ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣದ ವಿರುದ್ಧ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿತ್ತು. ಇದರ ಭಾಗವಾಗಿ ಪ್ರತಿಭಟನಾ ಮೆರವಣಿಗೆ ನಡೆದು ಬಳಿಕ ರಸ್ತೆ ತಡೆ ನಡೆಸಲಾಯಿತು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾರ್ಗಾ, ಸಹಬಾಳ್ವೆ ಉಡುಪಿ ಸಂಚಾಲಕರಾದ ಫಣಿರಾಜ್ ಮತ್ತು ಡಿ.ಎಸ್.ಎಸ್ ಮುಖಂಡರಾದ ಸುಂದರ್ ಮಾಸ್ಟರ್ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮಾತನಾಡಿದರು. AIBEA ಮುಖಂಡರಾದ ನಾಗೇಶ್, INTUC ಮುಖಂಡರಾದ ಕಿರಣ್ ಹೆಗ್ಡೆ, ಸಿಐಟಿಯು ಜಿಲ್ಲಾ ಅಧ್ಯಕ್ಷ ರಾದ ಶಶಿಧರ ಗೊಲ್ಲ, ಕಟ್ಟಡ ಸಂಘದ ಅಧ್ಯಕ್ಷರಾದ ಸುಭಾಸ್ ನಾಯಕ್,ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ರಾದ ಸಂಜೀವ ಬಳ್ಳೂರು,AITUC ಮುಖಂಡರಾದ ಶಶಿಕಲಾ,ಅಂಗನವಾಡಿ ಸಂಘ ಜಿಲ್ಲಾ ಅಧ್ಯಕ್ಷ ರಾದ ಭಾರತಿ.ಎಸ್,ಬಿಸಿಯೂಟ ಸಂಘದ ಅಧ್ಯಕ್ಷರಾದ ರತ್ನ,ಉಡುಪಿ ಬೀಡಿ ಮುಖಂಡರಾದ ಉಮೇಶ್ ಕುಂದರ್, ಜನರಲ್ ಯೂನಿಯನ್ ಕಾರ್ಯದರ್ಶಿ ರಮೇಶ್, ಸಿಐಟಿಯು ಮುಖಂಡರಾದ ನಳಿನಿ.ಎಸ್,ರಾಮ ಕಾರ್ಕಡ,ಸರೋಜ,ಸಾರಿಕ,ಶಾರದ,ಶರ್ಮಿಳ,ಸೌಮ್ಯ,ಶ್ವೇತಾ,ಕು ಸುಮ,ಮಂಜುಳ ಗಿರಿಜ,ಸೈಯಾದ್, ಮುರಳಿ,ರಮೇಶ್ ಬ್ರಹ್ಮಾವರ,ರಮೇಶ್, ವಾಮನಪೂಜಾರಿ,ನಾಗರಾಜ್,ರಾಮ ಸಾಲ್ಯಾನ್,ಗಣೇಶ್ ನಾಯ್ಕಶೇಖರ್ ಆಚಾರ್ಯ,ಸದಾಶಿವ ಪೂಜಾರಿ,,ಉಪಸ್ಥಿತರಿದ್ದರು JCTU ಉಡುಪಿ ಜಿಲ್ಲಾ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್ ಕಾರ್ಯಕ್ರಮ ನಿರೂಪಣೆ ಮಾಡಿದರು AITUC ಮುಖಂಡರಾದ ಶಿವಾನಂದ ವಂದನಾರ್ಪಣೆ ಮಾಡಿದರು.
