IMG-20241220-WA00051.jpg
Spread the love

ಉಡುಪಿ: ದಿನಾಂಕ: 12-02-2026 (ಹಾಯ್ ಉಡುಪಿ ನ್ಯೂಸ್)

ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತವು ಹೆಚ್ಚಾಗಲು ಕಾರಣ ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ.ಸ್ಥಳೀಯ ಲೋಕಸಭಾ ಸದಸ್ಯರು ಎಂದು ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ಜನಸಾಮಾನ್ಯರು ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಮತ್ತು ಅದರ ಸಂಬಂಧಪಟ್ಟ ಸಚಿವರು
ಮತ್ತು ಲೋಕಸಭಾ ಸದಸ್ಯರು .

ಕೇಂದ್ರದ ಮೋದಿ ಸರಕಾರದಿಂದ ಜನಸಾಮಾನ್ಯರು ರಸ್ತೆಯಲ್ಲಿ ಬಿದ್ದು ಸಾಯುತ್ತಿದ್ದಾರೆ ಇದನ್ನು ಕೇಳುವ ಗತಿಯೇ ಇಲ್ಲದಂತ ಪರಿಸ್ಥಿತಿ ಕೇಂದ್ರ ಸರಕಾರದ್ದಾಗಿದೆ,
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸದೆ ಇರುವ ಕಾರಣ, ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸುತ್ತಿರುವುದರಿಂದ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿ ಜನಸಾಮಾನ್ಯರು ಪ್ರಾಣವನ್ನು ಕಳೆದುಕೊಳ್ಳುವುದಲ್ಲದೆ ಕೈ ಕಾಲುಗಳನ್ನು ಮುರಿದುಕೊಂಡಿರುತ್ತಾರೆ .ಇದಕ್ಕೆಲ್ಲ ಕಾರಣ ಕೇಂದ್ರದ ಬಿಜೆಪಿ ಸರಕಾರ ಹಾಗೂ ಸ್ಥಳೀಯ ಸಂಸದರು.

ಕೇಂದ್ರ ಸರಕಾರ ಹಾಗೂ ಸ್ಥಳೀಯ ಸಂಸದರು ಆದಷ್ಟು ಬೇಗ ಈ 66 ರಾಷ್ಟ್ರೀಯ ಹೆದ್ದಾರಿನಲ್ಲಿ ಎರಡು ಬದಿಯಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸಿ ಕೊಟ್ಟರೆ ಮಾತ್ರ ಈ ಅಪಘಾತಗಳನ್ನು ನಿಲ್ಲಿಸಲಾಗುತ್ತದೆ .ಆದರೆ ಈಗ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿದ್ದು ನಮ್ಮ ಉಡುಪಿ ಸಂಸದರ ವೈಫಲ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ .

ಇದನ್ನು ಈ ಕೂಡಲೇ ಸರಿಪಡಿಸಿ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಸಂಪೂರ್ಣವಾಗಿ ಸರ್ವಿಸ್ ರಸ್ತೆಯನ್ನು ನಿರ್ಮಿಸಿ ಜನಸಾಮಾನ್ಯರ ಪ್ರಾಣವನ್ನು ಉಳಿಸಿ ಎಂದು ಕೇಂದ್ರ ಸರಕಾರಕ್ಕೆ ಮತ್ತು ಸ್ಥಳೀಯ ಲೋಕಸಭಾ ಸದಸ್ಯರಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಹಾಗೂ ಉಡುಪಿ ನಗರಸಭೆಯ ಸದಸ್ಯರು ಆದ ಸುರೇಶ್ ಶೆಟ್ಟಿ ಬನ್ನಂಜೆ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

error: No Copying!