images-19.jpeg
Spread the love

ಕಾರ್ಕಳ: ದಿನಾಂಕ:12-02-2026(ಹಾಯ್ ಉಡುಪಿ ನ್ಯೂಸ್) ಬೆಳ್ಮಣ್ ಪೇಟೆಯ ಕೋಟ್ಯಾನ್ ಕೋಳಿ ಅಂಗಡಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುಂದರ ಅವರು ಬಂಧಿಸಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುಂದರ ಅವರಿಗೆ ದಿನಾಂಕ 11/02/2026 ರಂದು ಸಂಜೆ ಸಾರ್ವಜನಿಕ ರಿಂದ ಬಂದ ಮಾಹಿತಿಯಂತೆ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಬೆಳ್ಮಣ್ ಪೇಟೆಯ ಕೋಟ್ಯಾನ್ ಕೋಳಿ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಕೀರ್ತನ್(31), ಮುಳ್ಳಗುಡ್ಡೆ, ಉಚ್ಚಿಲ ಹಾಗೂ ಯೋಗೀಶ(58), ನಂದಳಿಕೆ ಗ್ರಾಮ, ಕಾರ್ಕಳ ಎಂಬವರು ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಹಣವನ್ನು ಪಡೆದುಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಕೂಡಲೇ ಠಾಣೆಯ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ್ದಾರೆ .

ದಾಳಿ ನಡೆಸಿ ಆರೋಪಿತರನ್ನು ಬಂಧಿಸಿ ವಶಕ್ಕೆ ಪಡೆದು ಆರೋಪಿತರ  ವಶದಲ್ಲಿ ಇದ್ದ ಮಟ್ಕಾ ಜುಗಾರಿ ಆಟಕ್ಕೆ ಉಪಯೋಗಿಸಿದ ಮಟ್ಕಾ ನಂಬ್ರ ಬರೆದ ಚೀಟಿ, ನಗದು 2,440/- ರೂಪಾಯಿ ಹಾಗೂ ಬಾಲ್ ಪೆನ್ , ಪ್ಲಾಸ್ಟಿಕ್ ಕುರ್ಚಿ ಮತ್ತು ಸಣ್ಣ ಕಾಗದದ ಚೀಟಿಗಳು, ಮತ್ತು ಕಾರ್ಡ್ ಬೋರ್ಡ್ ನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ: 112(1) ಭಾರತೀಯ ನ್ಯಾಯ ಸಂಹಿತೆ 2023, ಕಲಂ 78 (i)(iii) ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!