ಕಾಪು: ದಿನಾಂಕ:17-02-2026(ಹಾಯ್ ಉಡುಪಿ ನ್ಯೂಸ್)ಉಡುಪಿಯಿಂದ ಅಸ್ಸಾಂನ ಗುಹಾಟಿಗೆ ಪ್ರವಾಸ ತೆರಳಿದ್ದ ಉಡುಪಿಯ ತಂಡದಲ್ಲಿದ್ದ ಓರ್ವ ಯುವಕ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಪ್ರವಾಸದ ಮಧ್ಯೆ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಅಸ್ವಸ್ಥಗೊಂಡ ಯುವಕನನ್ನು ಜೊತೆಯಲ್ಲಿದ್ದವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಮ್ರತ ಯುವಕನನ್ನು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಸರಕಾರಿ ಗುಡ್ಡೆ ನಿವಾಸಿ ಅಶೋಕ್ ಆಚಾರ್ಯ (33) ಎನ್ನಲಾಗಿದೆ. ಯುವಕನ ಅಕಸ್ಮಾತ್ತಾಗಿ ಸಾವಿನಿಂದ ಕುಟುಂಬ ಸದಸ್ಯರು ರೋಧಿಸುತ್ತಿದ್ದಾರೆ .
