Spread the love

ಕಾರ್ಕಳ: ಮೇ ೫(ಹಾಯ್ ಉಡುಪಿ ನ್ಯೂಸ್) ಮಹಿಳೆಯೋರ್ವರಿಗೆ ವಿನಾಕಾರಣ ರೀಪಿನಿಂದ ಹಲ್ಲೆ ನಡೆಸಿದ ಘಟನೆ ಎರ್ಲಪಾಡಿಯಲ್ಲಿ ನಡೆದಿದೆ.

ಎರ್ಲಪಾಡಿ ಗ್ರಾಮದ,ಕಣಾಮಜಲು ,ಹೆರಿಂಜೆ ಮನೆ ನಿವಾಸಿ ರಾಜೀವಿ ಶೆಟ್ಟಿ (೪೭) ಇವರು ದಿನಾಂಕ 04/05/2022 ರಂದು ಮನೆಯಿಂದ ದೇವಸ್ಥಾನಕ್ಕೆ ಹೋಗಿ ಕಾರ್ಕಳ ತಾಲೂಕು ಎರ್ಲಪ್ಪಾಡಿ ಗ್ರಾಮದ ಕಣಾಮಜಲು ಬಳಿ ವಾಸು ಶೆಟ್ಟಿ ಎಂಬವರ ಮನೆಯ ಹಿಂಬದಿ ಕಾಲುದಾರಿಯಲ್ಲಿ ನಡೆದುಕೊಂಡು ವಾಪಾಸು ಮನೆಗೆ ಬರುತ್ತಿದ್ದಾಗ ಬೆಳಿಗ್ಗೆ 11:00 ಗಂಟೆಗೆ ರಾಜೀವಿ ಶೆಟ್ಟಿಯವರ ನೆರೆಮನೆಯ ವಾಸಿ ವಾಸು ಶೆಟ್ಟಿ  ಕೈಯಲ್ಲಿ ರೀಪು ಹಿಡಿದುಕೊಂಡು ಬಂದು ರಾಜೀವಿ ಶೆಟ್ಟಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ರೀಪಿನಿಂದ ತಲೆಗೆ ಹೊಡೆದ ಪರಿಣಾಮ ರಾಜೀವಿ ಶೆಟ್ಟಿಯವರ ತಲೆಯ ಎಡಬದಿ ಗಾಯಗೊಂಡು ರಕ್ತ ಬಂದಿರುವುದಾಗಿ ನೀಡಿರುವ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

error: No Copying!