Spread the love

ಕಾರ್ಕಳ: ಮೇ ೫ (ಹಾಯ್ ಉಡುಪಿ ನ್ಯೂಸ್) ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಕಟ್ಟಡಕ್ಕೆ ಕಿಡಿಗೇಡಿಗಳು ಹಾನಿ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.

ಕೊಡಗು ಜಿಲ್ಲೆ,ಮಡಿಕೇರಿ, ಪೆರಾಜೆ ನಿವಾಸಿ ನವೀನ್ ಪಿ.ಡಿ (೨೮) ಇವರು  ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,  ಕಾರ್ಕಳ ತಾಲೂಕು ಕಸಬಾ ಗ್ರಾಮದ ಕಾಬೆಟ್ಟು ಎಂಬಲ್ಲಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಾರ್ಯಾಗಾರ ಹಾಗೂ ಟೆಕ್‌ ಲ್ಯಾಬ್‌‌ನ ಕಟ್ಟಡವನ್ನು ನಿರ್ಮಿಸಿದ್ದು, ಒಳಗಿನ ಸಾಮಾಗ್ರಿಗಳ ಅನುಷ್ಠಾನವು ಪ್ರಗತಿಯಲ್ಲಿರುತ್ತದೆ ಎಂದಿದ್ದಾರೆ. ದಿನಾಂಕ  04/05/2022 ರಂದು  ಸಂಜೆ ಯಾರೋ ಕಿಡಿಗೇಡಿಗಳು ಸರಕಾರಿ ತರಬೇತಿ ಸಂಸ್ಥೆಯ ಕಾರ್ಯಾಗಾರ ಹಾಗೂ ಟೆಕ್‌ ಲ್ಯಾಬ್‌‌ನ ಕಟ್ಟಡದ 12 ಕಿಟಕಿ ಗಾಜುಗಳನ್ನು ಒಡೆದು  1 ಲಕ್ಷ ನಷ್ಟವನ್ನುಂಟು ಮಾಡಿರುತ್ತಾರೆ ಎಂದು ಅವರು ದೂರು ನೀಡಿದ್ದು ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!