Spread the love

ಮಣಿಪಾಲ: ಮೇ ೪(ಹಾಯ್ ಉಡುಪಿ ನ್ಯೂಸ್) ಮನೆ ಬಾಡಿಗೆ ದಾರ ಮನೆ ಖಾಲಿ ಮಾಡದ ವಿಷಯಕ್ಕೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಅರುಣ ಕುಮಾರ್ ಎಂಬವರು ವಾಸವಿದ್ದ ಬಾಡಿಗೆ ಮನೆಯ ಮಾಲೀಕರಾದ ಉದಯ ಕುಮಾರ್ ಶೆಟ್ಟಿ ರವರು ದಿನಾಂಕ ೦೩-೫-೨೨ ರಂದು ಅರುಣಕುಮಾರರ ಹೆಂಡತಿಗೆ ಕರೆ ಮಾಡಿ ಮನೆ ಖಾಲಿ ಮಾಡಿ ಎಂದು ಏರುದ್ವನಿಯಲ್ಲಿ ಅವಾಚ್ಯ ಶಬ್ದದಲ್ಲಿ ಬೈದಿರುತ್ತಾರೆ ಎಂದು ದೂರಿದ್ದಾರೆ ಹಾಗೂ ಸಂಜೆ 07:45 ಗಂಟೆಗೆ ಅರುಣಕುಮಾರರು ವಾಸವಿದ್ದ ಬಾಡಿಗೆ ಮನೆಗೆ ಉದಯ ಕುಮಾರ್ ಶೆಟ್ಟಿ ಹಾಗೂ ಅವರ ಮಾವ ಸುಂದರ್ ರವರು ಅಕ್ರಮ ಪ್ರವೇಶ ಮಾಡಿ ಅರುಣಕುಮಾರರಿಗೂ ಹಾಗೂ ಅವರ ಹೆಂಡತಿ ಮತ್ತು ಮಗನಿಗೆ ಅವಾಚ್ಯ ಶಬ್ದದಿಂದ ಬೈದು ಅರುಣಕುಮಾರರ ಕೈಗೆ ಮುಖಕ್ಕೆ ಎದೆಗೆ ಹೊಡೆದು ಕಾಲಿನಿಂದ ತುಳಿದಿದ್ದಲ್ಲದೆ, ಜಗಳ ತಡೆಯಲು ಬಂದ ಅರುಣಕುಮಾರರ ಹೆಂಡತಿಯನ್ನು ತಳ್ಳಿರುತ್ತಾನೆ. ಈ ಸಮಯ ಅರುಣಕುಮಾರರ ಮಗನಿಗೂ ಉದಯ ಕುಮಾರ್ ಶೆಟ್ಟಿ ಹಾಗೂ ಸುಂದರ್ ರವರು ಕೈಯಿಂದ ಹೊಡೆದು ತಳ್ಳಿದ್ದು, ಅರುಣಕುಮಾರರಿಗೆ ಉದಯ ಕುಮಾರ್ ಶೆಟ್ಟಿ ರವರು ಮುಷ್ಠಿಮಾಡಿ ಮುಖಕ್ಕೆ ಹೊಡೆದ ಪರಿಣಾಮ ಅರುಣಕುಮಾರರ ಮೂಗು ಒಡೆದು ರಕ್ತ ಹರಿದಿರುತ್ತದೆ ಎಂದೂ ಈ ಘಟನೆಯು ಅರುಣಕುಮಾರರಿಗೆ ಈ ಕೂಡಲೇ ಮನೆ ಖಾಲಿ ಮಾಡಲು ಮನೆಯ ಮಾಲೀಕರು  ತಿಳಿಸಿದ್ದು,  ಅರುಣಕುಮಾರರು ಸ್ವಲ್ಪ ಕಾಲಾವಕಾಶ ಕೇಳಿದ್ದು ಅದಕ್ಕೆ ಮನೆಯ ಮಾಲೀಕರು  ಒಪ್ಪದೇ ಅರುಣಕುಮಾರರ ಮೇಲೆ ಹಲ್ಲೆ ಮಾಡಿರುತ್ತಾರೆ ಎಂದು ದೂರು ನೀಡಲಾಗಿದ್ದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: No Copying!