ಕೋಟ: ದಿನಾಂಕ :08-02-2026(ಹಾಯ್ ಉಡುಪಿ ನ್ಯೂಸ್) ಮಣೂರು ಗ್ರಾಮದ ನಿವಾಸಿ ಸಂದೀಪ್ ಕುಮಾರ್ ಹೆಗ್ಡೆ ಎಂಬವರು ಮಣ್ಣಿನ ವ್ಯವಹಾರ ನಡೆಸುತ್ತಿದ್ದು ಅವರಿಗೆ ಪ್ರಭಾವಿ ವ್ಯಕ್ತಿ ಯೋರ್ವನು ತನಗೆ ಪ್ರತಿ ತಿಂಗಳು ಹಣ ನೀಡಬೇಕೆಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ರಹ್ಮಾವರ,ಮಣೂರು ಗ್ರಾಮದ ನಿವಾಸಿ ಸಂದೀಪ್ ಕುಮಾರ್ ಹೆಗ್ಡೆ (32) ಎಂಬವರು ಸಾರಿಗೆ ವ್ಯವಹಾರ ನಡೆಸಿಕೊಂಡಿದ್ದು 2021 ನೇ ಸಾಲಿನಲ್ಲಿ ಪ್ರಭಾವಿ ಆರೋಪಿಯೊಬ್ಬ ನೊಂದಿಗೆ ವಡ್ಡರ್ಸೆ ಗ್ರಾಮದ ಯಾಳಹಕ್ಲು ಎಂಬಲ್ಲಿ ಮಣ್ಣಿನ ವ್ಯವಹಾರ ಮಾಡುತ್ತಿದ್ದು, ಪ್ರಭಾವಿ ಆರೋಪಿಯು ಹಿರಿಯ ಮುಖಂಡರೊಂದಿಗೆ ತನಗೆ ಒಡನಾಟ ಇರುವುದಾಗಿಯೂ ಸಂದೀಪ್ ಕುಮಾರ್ ಹೆಗ್ಡೆ ಯವರ ಬಳಿ ಹೇಳಿಕೊಂಡಿರುತ್ತಾನೆ.
ಪ್ರಭಾವಿ ಆರೋಪಿಗೂ ಹಾಗೂ ಸಂದೀಪ್ ಕುಮಾರ್ ಹೆಗ್ಡೆ ರವರಿಗೂ ಇರುವ ಮಣ್ಣಿನ ವ್ಯವಹಾರದ ಲೆಕ್ಕಾಚಾರದಲ್ಲಿ ಪ್ರಭಾವಿ ಆರೋಪಿಯು ಪದೇ ಪದೇ ಹಣ ಕೇಳುತ್ತಿದ್ದು, ಅಲ್ಲದೇ ಆತನ ವಾಟ್ಸಪ್ ನಂಬ್ರದಿಂದ ವಾಟ್ಸಪ್ ಬೆದರಿಕೆ ಸಂದೇಶಗಳನ್ನು ಹಾಗೂ ಪ್ರತಿ ತಿಂಗಳು ವ್ಯವಹಾರದಲ್ಲಿ ತನಗೆ 35000 ಹಣವನ್ನು ಕೊಡಬೇಕು ಇಲ್ಲವಾದಲ್ಲಿ ನಿಮ್ಮ ಪ್ರಾಣವನ್ನು ತೆಗೆಯುತ್ತೇನೆ ಎಂದುಬೈದು ದಿನಾಂಕ 08/02/2026 ರಂದು ಬೆಳಗ್ಗೆ ಪ್ರಭಾವಿ ಆರೋಪಿಯು ಆತನ ಸಹಚರ ಪ್ರವೀಣ ಎಂಬವನೊಂದಿಗೆ ಸಂದೀಪ್ ಕುಮಾರ್ ಹೆಗ್ಡೆ ರವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪ್ರತೀ ತಿಂಗಳು ನನಗೆ 35000/- ಹಣ ನೀಡದೇ ಇದ್ದಲ್ಲಿ ನಿನ್ನನ್ನು ನಿನ್ನ ಹೆಂಡತಿಯ ಪ್ರಾಣವನ್ನು ತೆಗೆಯುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಸಂದೀಪ್ ಕುಮಾರ್ ಹೆಗ್ಡೆ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 329(3),352,351(2),308(2), ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
