gettyimages-1251778019-612x612.jpg
Spread the love

ಕಾರ್ಕಳ: ದಿನಾಂಕ:08-02-2026(ಹಾಯ್ ಉಡುಪಿ ನ್ಯೂಸ್) ಕುಕ್ಕುಂದೂರು ಗ್ರಾಮದ ನಕ್ರೆಬೈಲ್ ಬೆಟ್ಟು ಎಂಬಲ್ಲಿನ ಮನೆಯೊಂದರಲ್ಲಿ ನಡೆಯುತ್ತಿದ್ದ  ಅಕ್ರಮ ಇಸ್ಪೀಟ್ ಜುಗಾರಿ ಅಡ್ಡೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮುರಳೀಧರ ನಾಯ್ಕ್ ಅವರು ದಾಳಿ ನಡೆಸಿ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮುರಳೀಧರ ನಾಯ್ಕ್ ಅವರಿಗೆ ದಿನಾಂಕ 07/02/2026 ರಂದು ರಾತ್ರಿ  ಆರೋಪಿತ ಅಶೋಕ ಎಂಬವನಿಗೆ ಸೇರಿದ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್‌‌ಬೆಟ್ಟು ಎಂಬಲ್ಲಿ ಸಾದ್ವಿನ್ ಎಂಬ ಹೆಸರಿನ ಮನೆಯ ಮೊದಲನೆ ಮಹಡಿಯಲ್ಲಿ ಮಂಗಳೂರಿನ ಅಪ್ರಿತ್ ಹಾಗೂ ನಿಶಾಂತ ಎಂಬುವರೊಂದಿಗೆ ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳಿಂದ ಅಂದರ್‌ ಬಾಹರ್‌ ಎಂಬ ಅದೃಷ್ಟದ ಜುಗಾರಿ ಆಟ ಆಡಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ.

ಪೊಲೀಸ್ ಸಿಬ್ಬಂದಿಯವರು ನೀಡಿದ ಖಚಿತ ಮಾಹಿತಿಯಂತೆ ಮುರಳೀಧರ ನಾಯ್ಕ್ ಅವರು ದಾಳಿ ನಡೆಯಿಸಿ ಆರೋಪಿಗಳನ್ನು ಬಂಧಿಸಿ,ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 22690/- ರೂಪಾಯಿ 52 ಇಸ್ಪೀಟ್ ಎಲೆಗಳು, 16 ಹೊಸ ಇಸ್ಟೀಟ್ ಎಲೆಗಳು ಇರುವ ಪ್ಯಾಕೆಟ್ 10 ಪ್ಲಾಸ್ಟಿಕ್ ಕುರ್ಚಿ 4 ಪ್ಲಾಸ್ಟಿಕ್ ಟೇಬಲ್ ಹಾಗೂ 9 ಮೊಬೈಲ್ ಪೋನ್‌‌ಗಳನ್ನುಮುಂದಿನ ಕ್ರಮದ ಬಗ್ಗೆ ಸ್ವಾದೀನಪಡಿಸಿ ಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ  ಕಲಂ: 79,80 KP ACT&112 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!