IMG_20260208_190303.jpg
Spread the love

ಉಡುಪಿ: ದಿನಾಂಕ :08-02-2026(ಹಾಯ್ ಉಡುಪಿ ನ್ಯೂಸ್)  ವಾಟ್ಸಪ್ ಆನ್ ಲೈನ್ ಮೂಲಕ ಪರಿಚಯವಾದ ಆರೋಪಿಗಳು ಇನ್ವೆಸ್ಟ್ಮೆಂಟ್ ಲಾಭದ ಬಗ್ಗೆ ನಂಬಿಸಿ 14 ಲಕ್ಷ ರೂಪಾಯಿ ವಂಚಿಸಿದ್ದಾರೆಂದು ಇರ್ಫಾನ್‌ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸುರತ್ಕಲ್,ಎಂಜಿ ರಸ್ತೆ ನಿವಾಸಿ ಇರ್ಫಾನ್ (40) ಎಂಬವರು ಉಡುಪಿಯ ವಿವಿಧ ಬ್ಯಾಂಕ್‌ ಗಳಲ್ಲಿ ಖಾತೆಯನ್ನು ಹೊಂದಿರುತ್ತಾರೆ.

ದಿನಾಂಕ 03/08/2025 ರಂದು ಇರ್ಫಾನ್ ರವರಿಗೆ ವಿವಿಧ ಆನ್ಲೈನ್‌ ಪೋನ್‌ ಕರೆಗಳು ಬಂದಿದ್ದು ಅದರಲ್ಲಿ ವಿಶಾಲ್‌ ರಾವ್‌ ಎಂಬುವವರು ಇನ್ವೆಸ್ಟ್ಮೆಂಟ್‌ ಬಗ್ಗೆ ಇರ್ಫಾನ್ ರಿಗೆ ತಿಳಿಸಿದ್ದು, ಇನ್ವೆಸ್ಟ್ಮೆಂಟ್‌ ಬಗ್ಗೆ ಇರ್ಫಾನ್ ರಿಗೆ ಆಸಕ್ತಿ ಇರುವುದರಿಂದ ಇರ್ಫಾನ್ ರವರು ವಿಶಾಲ್‌ ರಾವ್‌ ಎಂಬುವವರು ಪೋನ್‌ ಮೂಲಕ ತಿಳಿಸಿದಂತೆ www.mirrox.vip/client-area/login ಇದರಲ್ಲಿ ಒಂದು ಖಾತೆಯನ್ನ ಸೃಜಿಸಿರುತ್ತಾರೆ. ಅದಾದ ನಂತರದಲ್ಲಿ ವಿವಿಧ Zoom ID ಮೀಟಿಂಗ್‌ ಮೂಲಕ ಹಾಗೂ [email protected] ಎಂಬ ಮೇಲ್‌ ನಲ್ಲಿ ಇರ್ಫಾನ್ ರವರಿಗೆ ವಿವಿದ ಖಾತೆಗಳಿಗೆ ಹಣವನ್ನು ಹಾಕುವಂತೆ ತಿಳಿಸಿರುತ್ತಾರೆ.

ಅಪರಿಚಿತರು ತಿಳಿಸಿದಂತೆ ಇರ್ಫಾನ್ ರವರು ದಿನಾಂಕ 03/08/2025 ರಿಂದ 29/11/2025ರ ವರೆಗೆ ಒಟ್ಟು 14,07,025.68/- ಹಣವನ್ನ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದು ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶವನ್ನಾಗಲಿ ನೀಡದೇ ವಿಶಾಲ್ ರಾವ್ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸೈಬರ್‌ ಅಪರಾಧ ಪೊಲೀಸ್ ಠಾಣೆಯಲ್ಲಿ  ಕಲಂ: 66(ಸಿ)66(ಡಿ) ಐ.ಟಿ. ಆಕ್ಟ್, &ಕಲಂ: 318(4), BNS ರಂತೆ ಪ್ರಕರಣ ದಾಖಲಾಗಿದೆ.

error: No Copying!