ಮಣಿಪಾಲ: ದಿನಾಂಕ:03-02-2026(ಹಾಯ್ ಉಡುಪಿ ನ್ಯೂಸ್) ಪರ್ಕಳ ಜಂಕ್ಷನ್ ನಲ್ಲಿ ಅಡ್ಡಾದಿಡ್ಡಿಯಾಗಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕನನ್ನು ಹಿಡಿದು ವಿಚಾರಣೆ ನಡೆಸಿದ ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮೇಶ್.ಬಿ.ಎನ್.ಅವರು ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ ವಾಹನದ ಮಾಲೀಕರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮೇಶ್.ಬಿ.ಎನ್. ಅವರು ದಿನಾಂಕ 02/02/2026 ರಂದು ಠಾಣೆಯ ಸಿಬ್ಬಂದಿಯವರಾದ ಬಾಹುಬಲಿ, ಸುಕುಮಾರ್ ಶೆಟ್ಟಿರವರೊಂದಿಗೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಪರ್ಕಳ ಜಂಕ್ಷನ್ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ ಓರ್ವ ವ್ಯಕ್ತಿ KA-20 HF-1347 ನೇ ಸ್ಕೂಟರನ್ನು ಹೆರ್ಗಾ ಕಡೆಯಿಂದ ಪರ್ಕಳ ಕಡೆಗೆ ಅಡ್ಡಾದಿಡ್ಡಿಯಾಗಿ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬರುತ್ತಿದ್ದು ಪೊಲೀಸರು ಆತನನ್ನು ನಿಲ್ಲಿಸಿ ಹೆಸರು ವಿಳಾಸ ಕೇಳಿದಾಗ ಶ್ರೇಯಸ್ (16) ಎಂದು ತಿಳಿಸಿದ್ದು ಆತನು ಅಪ್ರಾಪ್ತ ವಯಸ್ಕನಾಗಿರುವುದು ಕಂಡು ಬಂದಿದ್ದು ಆತನಿಗೆ ಸ್ಕೂಟರ್ ಸವಾರಿ ಮಾಡಲು ಸೂಕ್ತ ಚಾಲನಾ ಲೈಸೆನ್ಸ್ ಇಲ್ಲದಿದ್ದರೂ ಸಹ ಆತನಿಗೆ ಸ್ಕೂಟರ್ ಸವಾರಿ ಮಾಡಲು ನೀಡಿದ KA-20 HF-1347 ನೇ ಸ್ಕೂಟರಿನ ಮಾಲೀಕರಾದ ಉಷಾ(45) ರವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ:4, 180, 184, 199(A) IMV Act ರಂತೆ ಪ್ರಕರಣ ದಾಖಲಾಗಿದೆ.
