images-23.jpeg
Spread the love

ಗಂಗೊಳ್ಳಿ: ದಿನಾಂಕ:03-02-2026 ಹಾಯ್ ಉಡುಪಿ ನ್ಯೂಸ್) ತ್ರಾಸಿ ಗ್ರಾಮದ ಸಣ್ಣ ಕುಂಬ್ರಿ ಎಂಬಲ್ಲಿ ರಸ್ತೆ ಯಲ್ಲಿ ವಾಕಿಂಗ್ ನಡೆಸುತ್ತಿದ್ದ ವ್ರಧ್ಧೆಯೋರ್ವರ ಕುತ್ತಿಗೆ ಯಲ್ಲಿದ್ದ ಚಿನ್ನದ ಸರ ವನ್ನು ಯಾರೋ ಅಪರಿಚಿತ ವ್ಯಕ್ತಿ ದರೋಡೆ ನಡೆಸಿದ ಘಟನೆ ನಡೆದಿದೆ.

ತ್ರಾಸಿ ಗ್ರಾಮದ ಸಣ್ಣ ಕುಂಬ್ರಿ,ಡೋನ್‌ ಬೋಸ್ಕೋ ಶಾಲೆ ರಸ್ತೆ ಬಳಿ ನಿವಾಸಿ ಸೀತಾ (83) ಎಂಬವರು ದಿನಾಂಕ: 03/02/2026 ರಂದು ಬೆಳಿಗ್ಗೆ  ಕುಂದಾಫುರ ತಾಲೂಕು ತ್ರಾಸಿ ಗ್ರಾಮದ ಸಣ್ಣಕುಂಬ್ರಿ ಬಳಿಯ ಅಂತೋನಿ ಡಿ ಅಲ್ಮೈಡಾ ಎಂಬವರ ಮನೆಯ ಎದುರಿನ ರಸ್ತೆಯಲ್ಲಿ ವಾಕಿಂಗ್‌ ಹೋಗುತ್ತಿದ್ದಾಗ ಯಾರೋ ಅಪರಿಚಿತ ವ್ಯಕ್ತಿ ಸೀತಾ ರವರ ಹಿಂದಿನಿಂದ ಬಂದು ಸೀತಾ ರವರಿಗೆ ಜೀವ ಬೆದರಿಕೆ ಹಾಕಿ ಬಲಾತ್ಕಾರವಾಗಿ ಅವರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಸುಮಾರು 22.470 ಗ್ರಾಂ ತೂಕದ ಸುಮಾರು 2 ಲಕ್ಷ ಬೆಲೆ ಬಾಳುವ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ   ಕಲಂ: 309(4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!