IMG_20260203_123835.jpg
Spread the love

ಕಾರ್ಕಳ: ದಿನಾಂಕ :03-02-2026 (ಹಾಯ್ ಉಡುಪಿ ನ್ಯೂಸ್) ಸಾಕು ನಾಯಿಯನ್ನು ಯಾರೋ ಅಪರಿಚಿತರು ಕೊಲ್ಲುವ ಉದ್ದೇಶದಿಂದ ಸ್ಪೋಟಕ ಬಳಸಿ ಕೊಲೆ ಮಾಡಿದ್ದಾರೆ ಎಂದು ರವೀಂದ್ರ ಪೂಜಾರಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರ್ಕಳ ,ನೀರೆ ನಾಟ್ಲ, ದರ್ಖಾಸ್ ಮನೆ, ನೀರೆ ಗ್ರಾಮ, ನಿವಾಸಿ ರವೀಂದ್ರ ಪೂಜಾರಿ (62)ಎಂಬವರು ತನ್ನ ಮನೆಯಲ್ಲಿ ಸಾಕಿದ ನಾಯಿಯು ದಿನಾಂಕ 01/02/2026 ರಂದು ಸಂಜೆ  ಮನೆಯಿಂದ ಹೊರಗಡೆ ಹೋಗಿದ್ದು, ರಾತ್ರಿಯಾದರೂ ವಾಪಾಸು ಮನೆಗೆ ಬಾರದೇ ಇದ್ದು, ದಿನಾಂಕ 02/02/2026 ರಂದು ಬೆಳಿಗ್ಗೆ  ಮನೆಯಿಂದ ಸ್ವಲ್ಪ ದೂರದಲ್ಲಿ ಹುಡುಕಾಡಿದಾಗ, ಹಾಡಿಯಲ್ಲಿ ನಾಯಿಯು ಸತ್ತು ಬಿದ್ದಿದ್ದು ಅದರ ತಲೆಯ ಭಾಗ, ಮುಖವು ಸಂಪೂರ್ಣವಾಗಿ ಛಿದ್ರವಾಗಿತ್ತು.

ಯಾರೋ ಅಪರಿಚಿತರು ಪ್ರಾಣಿ ಹಿಂಸೆ ಮಾಡುವ ಉದ್ದೇಶದಿಂದ ದಿನಾಂಕ 01/02/2026 ರಂದು ಸಂಜೆ  ಯಾವುದೋ ಸ್ಪೋಟಕವನ್ನು ರವೀಂದ್ರ ಪೂಜಾರಿ ರವರ ವಾಸದ ಮನೆಯಾದ ಕಾರ್ಕಳ ತಾಲೂಕು ನೀರೆ ಗ್ರಾಮದ ನಾಟ್ಲ ದರ್ಖಾಸ್ ನ ಹಾಡಿಯಲ್ಲಿ ಇಟ್ಟಿದ್ದನ್ನು ನಾಯಿ ತಿಂದು ಅದು ಸ್ಪೋಟಗೊಂಡು ಮೃತಪಟ್ಟಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ  ಕಲಂ: 325 BNS ಮತ್ತು 11(D) Prevention Of Cruelty to Animals Acẗ 1960 3,4 ರಂತೆ ಪ್ರಕರಣ ದಾಖಲಾಗಿದೆ.

error: No Copying!