Spread the love

ನವದೆಹಲಿ: ಮೇ೩ (ಹಾಯ್ ಉಡುಪಿ ನ್ಯೂಸ್) ಕೋವಿಡ್-೧೯ ಸೋಂಕಿನ ೪ ನೇ ಅಲೆಯ ಭೀತಿಯ ನಡುವೆಯೇ ಸೀರಂ ಸಂಸ್ಥೆಯು ಶುಭ ಸುದ್ದಿಯನ್ನು ನೀಡಿದೆ. ಮಕ್ಕಳಿಗಾಗಿ ಭಾರತದ ಸೀರಂ ಸಂಸ್ಥೆಯ ಕೊರೊನಾ ಲಸಿಕೆ ಕೊವೊವ್ಯಾಕ್ಸ್‌ ಈಗ ದೇಶದಾದ್ಯಂತ ಮಕ್ಕಳಿಗೂ ಲಭ್ಯವಿದೆ ಎಂದು ಕಂಪನಿಯ ಸಿಇಒ ಆಧಾರ್‌ ಪೂನಾವಾಲಾ ಮಂಗಳವಾರ ಹೇಳಿದ್ದಾರೆ. ನೊವಾವ್ಯಾಕ್ಸ್‌ ಅಭಿವೃದ್ಧಿಪಡಿಸಿರುವ ಕೊವೊವ್ಯಾಕ್ಸ್‌ ಭಾರತದಲ್ಲಿ ಈಗ ಮಕ್ಕಳಿಗೂ ಲಭ್ಯವಾಗಲಿದೆ’ ಎಂದು ಆಧಾರ್ ಪೂನಾವಾಲಾ ಅವರು ಟ್ವಿಟರ್‌ನಲ್ಲಿ  ಹೇಳಿದ್ದಾರೆ. ‘ಭಾರತದಲ್ಲೇ ತಯಾರಾಗಿರುವ ಲಸಿಕೆಯನ್ನು ಯುರೋಪ್‌ಗೂ ಮಾರಾಟ ಮಾಡಲಾಗುತ್ತಿದೆ. ಇದು ಶೇ 90 ರಷ್ಟು ಪರಿಣಾಮಕಾರಿಯಾಗಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

error: No Copying!