images-17.jpeg
Spread the love

ಬೈಂದೂರು: ದಿನಾಂಕ : 23.01.2026 (ಹಾಯ್ ಉಡುಪಿ ನ್ಯೂಸ್) ಕಳವಾಡಿ ಕಂಬಳ ಗದ್ದೆ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬೈಂದೂರು ಪೊಲೀಸ್‌ ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ಅವರು ದಾಳಿ ನಡೆಸಿ ಆರು ಜನರನ್ನು ಬಂಧಿಸಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್‌ ಕುಮಾರ್‌ ರವರಿಗೆ ದಿನಾಂಕ:22-01-2026 ರಂದು  ದೊರೆತ  ಖಚಿತ  ಮಾಹಿತಿ ಮೇರೆಗೆ ಠಾಣೆಯ ಸಿಬ್ಬಂದಿಯವರೊಂದಿಗೆ ಬೈಂದೂರು  ಗ್ರಾಮದ ಕಳವಾಡಿ ಕಂಬಳಗದ್ದೆ  ಎಂಬಲ್ಲಿ  ಆರೋಪಿಗಳು   ಕೋಳಿಗಳ ಕಾಲುಗಳಿಗೆ ಹರಿತವಾದ ಕೋಳಿ ಕತ್ತಿಗಳನ್ನು  ಕಟ್ಟಿ  ಹಿಂಸಾತ್ಮಕವಾಗಿ ಹಾರಾಟಕ್ಕೆ ಬಿಟ್ಟು ಕೋಳಿಗಳ  ಮೇಲೆ ಹಣವನ್ನು ಪಣವಾಗಿಟ್ಟು  ಕೋಳಿ ಅಂಕ ಜುಗಾರಿ   ನಡೆಸುತ್ತಿದ್ದ ಸ್ಥಳಕ್ಕೆ  ದಾಳಿ ನಡೆಸಿದ್ದಾರೆ.

ಪಿಎಸ್ಐಯವರು ದಾಳಿ ನಡೆಸಿದಾಗ ಜೂಜು ನಿರತರು ಕೋಳಿಯೊಂದಿಗೆ ಚದುರಿ ಹೋಗಿದ್ದು  ಆರೋಪಿಗಳ  ವಶದಲ್ಲಿದ್ದ  2 ಗಂಡು ಕೋಳಿಗಳು, ( ಅಂದಾಜು ಮೌಲ್ಯ  1200)  ಎರಡು  ಕೋಳಿ ಕತ್ತಿ ಮತ್ತು  ಹಗ್ಗ ಹಾಗೂ  ಜೂಜಾಟಕ್ಕೆ ಬಳಸಿದ  ನಗದು  600/-  ನ್ನು ಸ್ವಾದೀನಪಡಿಸಿಕೊಂಡಿದ್ದಾರೆ.

ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಆರೋಪಿತ 1 ಅಣ್ಣಪ್ಪ  (44) ಕಾಲ್ತೋಡು   ಗ್ರಾಮ 2. ಕೃಷ್ಣ ಪೂಜಾರಿ  (38) ಮುದೂರು ಗ್ರಾಮ  ಬೈಂದೂರು, 3. ಮಂಜುನಾಥ  ಪೂಜಾರಿ  (39) ಯಡ್ತರೆ  ಗ್ರಾಮ  ಬೈಂದೂರು 4. ನಾರಾಯಣ ಪೂಜಾರಿ  (34)  ಕಾಲ್ತೋಡು 5.  ಪ್ರವೀಣ  ಶೆಟ್ಟಿ, ಸೂರಕುಂದ 6. ಶಿವ  ದೇವಾಡಿಗ ಇವರುಗಳನ್ನು ಬಂಧಿಸಿದ್ದಾರೆ.

ಅವರ ವಿರುದ್ದ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ 11 (1) (ಎ)  ಪ್ರಾಣಿ ಹಿಂಸೆ ತಡೆ  ಕಾಯಿದೆ  ಮತ್ತು ಕಲಂ  87, 93  KP Act ರಂತೆ ಪ್ರಕರಣ ದಾಖಲಾಗಿದೆ.

error: No Copying!