IMG_20260123_125802.jpg
Spread the love

ಉಡುಪಿ:  ದಿನಾಂಕ:23-01-2026 (ಹಾಯ್ ಉಡುಪಿ ನ್ಯೂಸ್)  ನಗರಸಭೆಯ ಕಂದಾಯ ನಿರೀಕ್ಷಕರೋರ್ವರಿಗೆ ಯಾರೋ ಅಪರಿಚಿತರು ಲೋಕಾಯುಕ್ತ ಅಧಿಕಾರಿಗಳು ಎಂದು ಬೆದರಿಸಿ ಫೋನ್ ಕರೆ ಮಾಡಿರುವ ಬಗ್ಗೆ ಕಂದಾಯ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ನಗರ ಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರಾದ ಕಪಿಲ್ ದೇವ್ ಎಸ್ ಗೋಡೆ ಮನೆ ಎಂಬವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಡುಪಿ ನಗರ ಸಭೆಯಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸಿಕೊಂಡಿದ್ದಾರೆ.

ದಿನಾಂಕ : 19/01/2026 ರಂದು ಮಧ್ಯಾಹ್ನ  ವಾಟ್ಸಪ್‌ ಮುಖಾಂತರ ಕಪಿಲ್ ದೇವ್ ಎಸ್ ಗೋಡೆ ಮನೆ ರವರ ಮೊಬೈಲ್‌ ಗೆ ಯಾರೋ ಅಪರಿಚಿತ ವ್ಯಕ್ತಿಯು  ಮೊಬೈಲ್‌ ನಿಂದ  ಫೋನ್‌ ಕರೆ ಮಾಡಿ ತನ್ನ ಹೆಸರು ಚೆಲುವರಾಜ್‌ ಲೋಕಾಯುಕ್ತ ಇನ್ಸ್ ಪೆಕ್ಟರ್‌ ಮಂಗಳೂರು ಡಿವಿಜನ್‌ ನಿಂದ ಮಾತನಾಡುತ್ತಿದ್ದು “ನಿಮ್ಮ ಮೇಲೆ ಈ ಮೇಲ್‌ ಮುಖಾಂತರ ದೂರು ಬಂದಿದ್ದು, ಸದರಿ ದೂರನ್ನು ಬಗೆಹರಿಸಿಕೊಳ್ಳಿ, ನಿರಾಕರಿಸಿದರೇ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ ಹಾಗೂ ಇಲಾಖಾ ವಿಚಾರಣೆ ಮಾಡುವುದಾಗಿ ಹೇಳಿರುತ್ತಾನೆ.‌ ಆ ನಂತರ ಇನ್ನೊಬ್ಬ ವ್ಯಕ್ತಿಗೆ ಫೋನ್‌ ಕರೆ ಕೊಟ್ಟಿದ್ದು, ಆತನು ನಾನು ಇಲ್ಲಿ ಹಿರಿಯ ಅಧಿಕಾರಿಯಾಗಿದ್ದು, ಈಗಾಗಲೇ ನಮ್ಮ ಅಧಿಕಾರಿಯು ತಿಳಿಸಿದಂತೆ ನಡೆದುಕೊಳ್ಳಿ ಇಲ್ಲವಾದಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ” ಎಂದು ಹೇಳಿರುತ್ತಾನೆ.

ಕಪಿಲ್ ದೇವ್ ಎಸ್ ಗೋಡೆ ಮನೆ ರವರು ಈ ಬಗ್ಗೆ ಖಚಿತಪಡಿಸಿಕೊಳ್ಳಲು ಉಡುಪಿ ಲೋಕಾಯುಕ್ತ ಕಛೇರಿಗೆ ಹೋಗಿ “ವಾಟ್ಸಾಪ್‌ ಮುಖಾಂತರ ಫೋನ್‌ ಕರೆ ಮಾಡಿದ್ದ ವ್ಯಕ್ತಿಗಳ ಬಗ್ಗೆ ವಿಚಾರಿಸಿದಾಗ, ಆ ಹೆಸರಿನ ವ್ಯಕ್ತಿಗಳು ನಮ್ಮ ಕಚೇರಿಯಲಿಲ್ಲ ಹಾಗೂ ನಿಮಗೆ ಬಂದಂತಹ ಕರೆ ನಮ್ಮ ಕಚೇರಿಯಿಂದಲ್ಲ ಎಂದು ಹೇಳಿರುತ್ತಾರೆ. ಕಪಿಲ್ ದೇವ್ ಎಸ್ ಗೋಡೆ ಮನೆರವರಿಗೆ ಲೋಕಾಯುಕ್ತ ಅಧಿಕಾರಿ ಎಂದು ಹೇಳಿ ಯಾರೋ ವಂಚನೆ ಮಾಡಲು ಯತ್ನಿಸಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ 319(2), 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!