IMG-20241220-WA00051.jpg
Spread the love

ಉಡುಪಿ: ದಿನಾಂಕ:22-01-2026(ಹಾಯ್ ಉಡುಪಿ ನ್ಯೂಸ್)

ಮಾನ್ಯ ಸುನಿಲ್ ಕುಮಾರ್ ಅವರೇ ಮತ್ತು ಉಡುಪಿಯ ಶಾಸಕ ಯಶ್ ಪಾಲ್ ಸುವರ್ಣ ರವರೆ ಪರ್ಯಾಯ ಮಹೋತ್ಸವದಲ್ಲಿ ಉಡುಪಿಯ ಜಿಲ್ಲಾಧಿಕಾರಿಯವರು ಆರ್ ಎಸ್ ಎಸ್ ಧ್ವಜವನ್ನು ಹಿಡಿದುಕೊಂಡು ಚಾಲನೆಯನ್ನು ನೀಡಿರುವುದನ್ನು ಸಮರ್ಥಿಸಲು ನಿಮಗೆ ಯಾವ ನೈತಿಕತೆ ಇದೆ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನಿಸಿದ್ದಾರೆ.

ಉಡುಪಿಯ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸಿ ಆರ್ ಎಸ್ ಎಸ್ ಧ್ವಜವನ್ನು ಹಿಡಿದು ಪರ್ಯಾಯ ಉತ್ಸವಕ್ಕೆ ಚಾಲನೆ ನೀಡಿದ ಉಡುಪಿಯ ಜಿಲ್ಲಾಧಿಕಾರಿ ಯಾರು? ಮಠದ ಆಡಳಿತ ಅಧಿಕಾರಿಯೇ? ಅಥವಾ ಉಡುಪಿ ನಗರಸಭೆಯ ಆಡಳಿತ ಅಧಿಕಾರಿಯೇ ?ಎಂಬುದನ್ನು ಅವರೇ ಸ್ಪಷ್ಟನೆ ನೀಡಬೇಕಾಗಿದೆ .ಇದುವರೆಗಿನ ಉಡುಪಿ ಪರ್ಯಾಯೋತ್ಸವ ಕಾರ್ಯಕ್ರಮಕ್ಕೆ ಯಾವುದೇ ಜಿಲ್ಲಾಧಿಕಾರಿಗಳು ಆರ್ ಎಸ್ ಎಸ್ ಧ್ವಜವನ್ನು ಆರಿಸಿರಲಿಲ್ಲ ಆದರೆ ಈ ಬಾರಿ ಉಡುಪಿಯ ಜಿಲ್ಲಾಧಿಕಾರಿಯವರು ಆರ್ ಎಸ್ ಎಸ್ ಧ್ವಜವನ್ನು ಹಾರಿಸುವ ಮೂಲಕ ಪರ್ಯಾಯ ಉತ್ಸವಕ್ಕೆ ಚಾಲನೆ ನೀಡಿದ್ದು ಸಂವಿಧಾನಿಕ ತಪ್ಪು .ಉಡುಪಿಯ ಜಿಲ್ಲಾಧಿಕಾರಿಯವರು ತಾವು ಒಬ್ಬರು ಸರಕಾರದ ಪ್ರತಿನಿಧಿ ಎಂಬುದನ್ನು ಮರೆತಂತೆ ಇದೆ.
ನಮ್ಮ ದೇಶಕ್ಕೆ ನಮ್ಮ ರಾಷ್ಟ್ರಧ್ವಜ ಹೊರತು ಬೇರೆ ಯಾವುದೇ ಧ್ವಜಗಳು ಇರುವುದಿಲ್ಲ ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರುಗಳು ಕೇವಲ ಮತಗಳಿಸಲಿಕ್ಕೋಸ್ಕರ ಈ ರೀತಿಯಾಗಿ ಜನಸಾಮಾನ್ಯರನ್ನು ಮೋಸಗೊಳಿಸುತ್ತಿದ್ದಾರೆ .ಮಾತ್ರವಲ್ಲದೆ ಉಡುಪಿಯ ಜಿಲ್ಲಾಧಿಕಾರಿಯವರನ್ನು ಕೂಡ ತಮ್ಮ ಹಿಂದುತ್ವದ ಬಲೆಯೊಳಗೆ ಸಿಲುಕಿಸಿರುತ್ತಾರೆ ಎಂಬುದು ಇಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ .

ಬಿಜೆಪಿಯ ನಾಯಕರುಗಳಿಗೆ ಗೋಚರಿಸುತ್ತಿರುವುದು ಪಾಕಿಸ್ತಾನ ಧ್ವಜ ಮತ್ತೆ ಕಾಂಗ್ರೆಸ್ ಪಕ್ಷ ಇದರಿಂದಾಗಿ ಇವರು ಜನರನ್ನು ಮೋಸಗೊಳಿಸಿ ತಮ್ಮ ಗೆಲುವನ್ನು ಸಾಧಿಸಲು ಹೊರಟಿರುತ್ತಾರೆ ಇಂತಹ ದುಷ್ಟ ಶಕ್ತಿಗಳಿಗೆ ಇನ್ನು ಮುಂದೆ ಪಾಠ ಕಲಿಸಲು ನಮ್ಮ ಜಿಲ್ಲೆಯ ಪ್ರಜ್ಞಾವಂತ ಮತದಾರರು ಎಚ್ಚೆತ್ತುಕೊಳ್ಳಬೇಕಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಹಾಗೂ ಉಡುಪಿ ನಗರಸಭೆಯ ನಾಮ ನಿರ್ದೇಶಿತ ಸದಸ್ಯರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಇವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

error: No Copying!