IMG_20260122_233123.jpg
Spread the love

ದಿನಾಂಕ:22-01-2026(ಹಾಯ್ ಉಡುಪಿ ನ್ಯೂಸ್)

ರೋಟರಿ ಕ್ಲಬ್ ಬ್ರಹ್ಮಾವರ, ರೋಟರ‍್ಯಾಕ್ಟ್ ಕ್ಲಬ್ ಬ್ರಹ್ಮಾವರ, ಇಂಟರ‍್ಯಾಕ್ಟ್ ಕ್ಲಬ್, ಸರಕಾರಿ ಪ್ರೌಢ ಶಾಲೆ ಕರ್ಜೆ, ಜೇಸಿಐ ಕಲ್ಯಾಣಪುರ, ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಲೀಜನ್ ಇವರ ಸಂಯುಕ್ತ ಆಶ್ರಯದಲ್ಲಿ ಪರೀಕ್ಷೆ ಎದುರಿಸುವುದು ಹೇಗೆ ? ಹಾಗೂ ಆರೋಗ್ಯ ಮಾಹಿತಿ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ ಕರ್ಜೆಯ ಶಾಲಾ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಕ್ಷಾಧಿನಿ ಉದ್ಘಾಟಿಸಿ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಬ್ರಹ್ಮಾವರದ ಅಧ್ಯಕ್ಷರಾದ ಸತೀಶ್ ಶೆಟ್ಟಿಯವರು ವಹಿಸಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಜೇಸಿ ತರಬೇತುದಾರ ನರೇಂದ್ರ ಕುಮಾರ್ ಕೋಟರವರು ಪರೀಕ್ಷೆ ಎದುರಿಸುವುದು ಹೇಗೆ ? ತರಬೇತಿಯನ್ನು ನಡೆಸಿಕೊಟ್ಟರು. ಕರ್ಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಶ್ರೀಮತಿ ಪ್ರೇಮಾರವರು ವಿದ್ಯಾರ್ಥಿಗಳಲ್ಲಿ ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಸೀನಿಯರ್ ಛೇಂಬರ್ ಉಡುಪಿ ಟೆಂಪಲ್ ಸಿಟಿ ಲೀಜನ್‌ನ ಅಧ್ಯಕ್ಷ ಶಿವಾನಂದ ಶೆಟ್ಟಿಗಾರ್, ಜೇಸಿಐ ಕಲ್ಯಾಣಪುರದ ಅಧ್ಯಕ್ಷ ವಿರೇನ್ ವಿ. ಸುವರ್ಣ, ರೋರ‍್ಯಾಕ್ಟ್ ಅಧ್ಯಕ್ಷ ಆಶಿಶ್ ಅಂದ್ರಾದೆ, ರೋರ‍್ಯಾಕ್ಟ್ ಸಭಾಪತಿ ಸುಂದರಾಮ್ ಶೆಟ್ಟಿ, ಇಂರ‍್ಯಾಕ್ಟ್ ಸಭಾಪತಿ ಜಗದೀಶ್ ಕೆಮ್ಮಣ್ಣು, ಇಂರ‍್ಯಾಕ್ಟ್ ಸಂಯೋಜಕ ಪ್ರೀತ್ ಶೆಟ್ಟಿ, ರೋರ‍್ಯಾಕ್ಟ್ ಕ್ಲಬ್ ಬ್ರಹ್ಮಾವರ ಮಾಜಿ ಅಧ್ಯಕ್ಷ ಮಧುಸೂದನ್, ಇಂರ‍್ಯಾಕ್ಟ್ ಶಿಕ್ಷಕ ಸಂಯೋಜಕ ಜಗದೀಶ್ ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ರೆಕ್ಸಾನ್ ಮೋನಿಸ್ ಧನ್ಯವಾದ ಸಮರ್ಪಿಸಿದರು.

error: No Copying!