ಉಡುಪಿ: ದಿನಾಂಕ:22-01-2026(ಹಾಯ್ ಉಡುಪಿ ನ್ಯೂಸ್) ರಸ್ತೆ ಸುರಕ್ಷತಾ ಸಪ್ತಾಹ -2026 ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಗ್ರೀನೋಳೆ ಇಲ್ಲಿ ಮಲ್ಪೆ ವೃತ್ತ ನಿರೀಕ್ಷಕರಾದ ರಾಮಚಂದ್ರ ನಾಯಕ್ ಹಾಗೂ ಸಂಚಾರ ಠಾಣಾ ಉಪನಿರೀಕ್ಷಕರಾದ ಪ್ರಕಾಶ್ ಎಸ್ ಮತ್ತು ಸಹಾಯಕ ಪೊಲೀಸ್ ನಿರೀಕ್ಷಕರಾದ ಸುರೇಶ್ ಪ್ರಭು ಇವರು ಸಂಚಾರ ಸುವ್ಯವಸ್ಥೆ ,ಸಂಚಾರ ನಿಯಮಗಳು ,ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ನೀಡಿದರು.
