IMG-20240220-WA0038.jpg
Spread the love

ಹೆಬ್ರಿ: ದಿನಾಂಕ :21-01-2026(ಹಾಯ್ ಉಡುಪಿ ನ್ಯೂಸ್) ಪಕ್ಕದ ಮನೆಯ ವ್ಯಕ್ತಿ ಅಕ್ರಮವಾಗಿ ಮನೆಯ ಅಂಗಳಕ್ಕೆ ಪ್ರವೇಶ ಮಾಡಿ ಸಲ್ಲದ ಆರೋಪ ಹೊರಿಸಿ ವ್ಯಕ್ತಿ ಯೋರ್ವರಿಗೆ ಹಲ್ಲೆ ನಡೆಸಿರುವ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ರಿ ವರಂಗ ಗ್ರಾಮದ ಮಾತಿಬೆಟ್ಟು ನಿವಾಸಿ ವಿದ್ಯಾನಂದ ಶೆಟ್ಟಿ (45) ಎಂಬವರು ದಿನಾಂಕ:19-01-2026 ರಂದು ತನ್ನ ಮನೆಯಲ್ಲಿ ಇರುವಾಗ ಪಕ್ಕದ ಮನೆಯ ಪ್ರಕಾಶ ತೆಲಿಗ ಎಂಬವರು  ವಿದ್ಯಾನಂದ ಶೆಟ್ಟಿ ರವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ತನಗೆ ವರಂಗ ಸಹಕಾರಿ ಬ್ಯಾಂಕಿನಲ್ಲಿ ಇರುವ ಸಾಲದ ಬಗ್ಗೆ ಅಲ್ಲಿ ಕೆಲಸ ಮಾಡುವ   ವಿದ್ಯಾನಂದ ಶೆಟ್ಟಿ ರವರ ಅಕ್ಕನಿಗೆ ಹೇಳಿಸಿ ನೀನು ಬೇಕಂತಲೆ ನೋಟಿಸ್‌ ಜ್ಯಾರಿ ಮಾಡುತ್ತಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲೆ ಇದ್ದ ಮುಷ್ಟಿ ಗಾತ್ರದ ಕಲ್ಲನ್ನು ಹಿಡಿದು ವಿದ್ಯಾನಂದ ಶೆಟ್ಟಿ ರವರ ಎದೆಗೆ ಗುದ್ದಿದ್ದು ಹಾಗೂ ಅದೇ ಕಲ್ಲು ವಿದ್ಯಾನಂದರವರ ಕಾಲ ಮೇಲೆ ಬಿದ್ದು ಒಳ ನೋವು ಆಗಿದ್ದು ಹಾಗೂ ಅವರ ಅಂಗಿಯನ್ನು ಹಿಡಿದು ಪ್ರಕಾಶ ತೆಲಿಗ ಎಳೆದಾಡಿ ದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ  ಕಲಂ: 239(3) 118, 352,351(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!