IMG_20260121_194118.jpg
Spread the love

ಉಡುಪಿ: ದಿನಾಂಕ:21-01-2026(ಹಾಯ್ ಉಡುಪಿ ನ್ಯೂಸ್) ಬಿಗ್ ಬಾಸ್ ಕನ್ನಡ ಸೀಸನ್-12 ರ ರನ್ನರ್ ಅಪ್ ಉಡುಪಿ ಜಿಲ್ಲೆಯ ಪಡುಬಿದ್ರಿ ಮೂಲದ ರಕ್ಷಿತಾ ಶೆಟ್ಟಿ ಇಂದು ಉಡುಪಿ ಜಿಲ್ಲೆಗೆ ಪ್ರವೇಶಿಸುತ್ತಿದ್ದಂತೆ ಹೆಜಮಾಡಿ ಯಲ್ಲಿ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು.

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ತುಳುನಾಡಿನ ಜಾನಪದ ಕಲೆ, ಸಾಂಸ್ಕೃತಿಕ ವೈಶಿಷ್ಟ್ಯ, ಮೀನುಗಾರಿಕೆ, ಹುಲಿವೇಷ,ಕಂಬಳದ ಬಗ್ಗೆ ಮಾತನಾಡಿದ್ದ ರಕ್ಷಿತಾ ಳಿಗೆ ಉಡುಪಿ ಖ್ಯಾತಿಯ ಬಂಗುಡೆ ಮೀನು ನೀಡಿ ರಕ್ಷಿತಾ ಳನ್ನು ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು. ರಕ್ಷಿತಾ ಕೂಡ ಬಂಗುಡೆ ಮೀನು ಹಿಡಿದು ಕುಣಿದು ಸಂಭ್ರಮಿಸಿದರು.

error: No Copying!