ಕಾರ್ಕಳ: ಮೇ ೩(ಹಾಯ್ ಉಡುಪಿ ನ್ಯೂಸ್)ತನ್ನ ಪತ್ನಿಯ ಹೆಸರಿನಲ್ಲಿ ಸಾಲ ಮಾಡಿ ಟಿವಿ ಖರೀದಿಸಿದ್ದಕ್ಕಾಗಿ ಸಿಟ್ಟುಗೊಂಡು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಕಾರ್ಕಳ ತಾಲೂಕು , ಕಸಬಾ ಗ್ರಾಮದ, ಬಂಗ್ಲೆ ಗುಡ್ಡೆ ಮನೆ ನಿವಾಸಿ ಇನಾಯತ್ (೩೨) ಇವರ ಸಂಬಂಧಿ ಅಲ್ತಾಫ್ ಎಂಬುವವರ ಹೆಂಡತಿ ಆಸ್ಮಾ ಎಂಬುವವರು ತನ್ನ ಹೆಸರಿನಲ್ಲಿ ಬಜಾಜ್ ಫೈನಾನ್ಸ್ ನಿಂದ ಸಾಲ ತೆಗೆದುಕೊಂಡು ದೊಡ್ಡದಾದ ಟಿ ವಿ ತೆಗೆದುಕೊಡುತ್ತೇನೆ ಕಂತನ್ನು ಕಟ್ಟುತ್ತಾ ಬನ್ನಿ ಎಂದು ಹೇಳಿದ್ದು ಇನಾಯತ್ ರವರು ಇದಕ್ಕೆ ಒಪ್ಪಿ ಟಿವಿಯನ್ನು ಖರೀದಿಸಿ ತನ್ನ ಮನೆಯಲ್ಲಿ ಇಟ್ಟಿರುತ್ತಾರೆ ಎಂದು ಹೇಳಿ ಕೊಂಡಿದ್ದಾರೆ.ದಿನಾಂಕ 01/05/2022 ರಂದು ಮಧ್ಯಾಹ್ನ 02:40 ಘಂಟೆಗೆ ಅಲ್ತಾಫ್, ಅದ್ನಾನ್, ಅತೀಫ್, ಅಜೀಮ್ ಮತ್ತು ಶಬೀರ್ ಎಂಬವರು ಸೇರಿಕೊಂಡು ಮಾರಕಾಯುಧ ಹಿಡಿದುಕೊಂಡು ಕಾರ್ಕಳ ಕಸಬಾದ ಬಂಗ್ಲೆಗುಡ್ಡೆಯಲ್ಲಿರುವ ಇನಾಯತ್ ಮನೆ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅಲ್ತಾಫ್, ಶಬೀರ್ ಹಾಗೂ ಅಜೀಮ್‌ರವರು ಇನಾಯತ್ ರವನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕರೆದಾಗ ಇನಾಯತ್ ರವರ ತಾಯಿ ಬೀಬಿ ಭಾನು(57) ರವರು ಏನೆಂದು ವಿಚಾರಿಸಲು ಮನೆಯೊಳಗಿನಿಂದ ಹೊರಗೆ ಬಂದಾಗ ಅಲ್ತಾಫ್, ಅದ್ನಾನ್ ಹಾಗೂ ಅತೀಫ್‌ರವರು ಕೈಯಿಂದ ಮಣ್ಣನ್ನು ಇನಾಯತ್ ರವರ ತಾಯಿಯ ಮೇಲೆ ಎಸೆದು ಅಲ್ತಾಫ್ ಮತ್ತು ಅದ್ನಾನ್‌ರವರು ಅವರ ಬಲಕೈಯನ್ನು ಹಿಡಿದು ತಿರುಗಿಸಿ ಹಲ್ಲೆ ಮಾಡಿದ್ದು, ಅವರು ಬೊಬ್ಬೆ ಹಾಕಿದಾಗ ಇನಾಯತ್ ರವರು ಅವರಿಂದ ತಾಯಿಯನ್ನು ಬಿಡಿಸಲು ಬಂದಾಗ ಅಜೀಮ್ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ಹಣೆಗೆ ಮತ್ತು ಮೂಗಿಗೆ ಹೊಡೆದ ಪರಿಣಾಮ ಮೂಗಿನಿಂದ ರಕ್ತ ಬಂದಿದ್ದು ಶಬೀರನು ನೆಲಕ್ಕೆ ದೂಡಿ ಹಾಕಿ ಎರಡೂ ಕಾಲುಗಳಿಗೆ ತುಳಿದಿರುತ್ತಾನೆ ಎಂದು ದೂರಿದ್ದಾರೆ. ಗಾಯಗೊಂಡ ಇನಾಯತ್ ರವರನ್ನು ಮತ್ತು ಬೀಬಿ ಭಾನುರವರನ್ನು ಇನಾಯತ್ ರವರ ಬಾವ ಮಹಮ್ಮದ್ ಶಫಿರವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಇಬ್ಬರನ್ನೂ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.