ಉಡುಪಿ: ಮೇ ೩(ಹಾಯ್ ಉಡುಪಿ ನ್ಯೂಸ್) ವಿದ್ಯಾವಂತ ಯುವತಿಯೋರ್ವಳನ್ನು ಸಹೋದ್ಯೋಗಿಯೇ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ ನಡೆದಿದೆ.
ಕು. ಶಾಲಿನಿ ಇವರು ಬಿಸಿಎ ಪದವೀಧರೆಯಾಗಿದ್ದು, ಬೆಂಗಳೂರಿನ ಧನಿರಾಮ್ ಕಂಪನಿಯಲ್ಲಿ ಕಲೆಕ್ಷನ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಅದೇ ಕಂಪೆನಿಯಲ್ಲಿ 2021 ಡಿಸೆಂಬರ್ ತಿಂಗಳಲ್ಲಿ ಕಲೆಕ್ಷನ್ ಎಕ್ಸಿಕ್ಯೂಟಿವ್ ಕೆಲಸದಲ್ಲಿದ್ದ ಕೋಲಾರ ಜಿಲ್ಲೆಯ ಮಾಲೂರಿನ ನಿವಾಸಿಯಾದ ನಿತೀನ್ ಕುಮಾರ್ ಎಂಬವನು ಪರಿಚಯ ಮಾಡಿಕೊಂಡು ಕು.ಶಾಲಿನಿಯನ್ನು ನಂಬಿಸಿ ದುಬೈ ಕಂಪನಿಯಲ್ಲಿ ಹಾಗೂ ನಂತರದ ದಿನದಲ್ಲಿ ಅಮೇರಿಕಾದ ಮನಿಮೇಕರ್ ಟೆಕ್ಸ್ ಝೋನ್ ಪ್ರೈ ಲಿ ಕಂಪನಿಯಲ್ಲಿ ಫ್ಲೋರ್ ಮ್ಯಾನೇಜರ್ ಕೆಲಸ ಕೊಡಿಸುವುದಾಗಿ ನಂಬಿಸಿ, ದಿನಾಂಕ: 07/05/2021 ರಿಂದ ಕು.ಶಾಲಿನಿಯವರ ಹೆಸರಿನಲ್ಲಿರುವ ಕುಂದಾಪುರ ಶಾಖೆಯ ಯೂನಿಯನ್ ಬ್ಯಾಂಕ್ ಖಾತೆಯಿಂದ ರೂ. 22,63,999/-, ಕೋರಮಂಗಲ ಶಾಖೆಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ನ ಎಸ್.ಬಿ ಖಾತೆಯಿಂದ ರೂ. 5,85,500/- ಹಾಗೂ ಕು.ಶಾಲಿನಿಯ ತಂದೆ ಕೆ. ನರಸಿಂಹ ಪೂಜಾರಿಯವರ ಕುಂದಾಫುರ ಶಾಖೆಯ ಎಸ್.ಬಿ.ಐ ಬ್ಯಾಂಕ್ ಖಾತೆಯಿಂದ ರೂ. 5,16,302/- ನಂತೆ ಒಟ್ಟು ರೂ. 33,65,801/- ನಗದು ಹಣವನ್ನು ನಿತೀನ್ ಕುಮಾರನ ಕೋರಮಂಗಲ ಶಾಖೆಯ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಖಾತೆಗೆ ಮೊಬೈಲ್ ಫೋನ್ ಫೇ ಆ್ಯಪ್ ಮತ್ತು ನೆಪ್ಟ್ ಮೂಲಕ ಹಣ ಹಾಕಿಸಿಕೊಂಡು ಕು.ಶಾಲಿನಿಯವರಿಗೆ ಕೆಲಸವನ್ನೂ ಕೊಡಿಸದೇ ಹಣವನ್ನೂ ವಾಪಾಸು ನೀಡದೇ ನಿತೀನ್ ಕುಮಾರ್ ಎಂಬಾತನು ನಂಬಿಕೆ ದ್ರೋಹ, ವಂಚನೆ ಹಾಗೂ ಮೋಸ ಮಾಡಿರುತ್ತಾನೆ ಎಂದು ಕು.ಶಾಲಿನಿ ದೂರು ನೀಡಿದ್ದು ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ