ಕಾರ್ಕಳ: ಮೇ ೨(ಹಾಯ್ ಉಡುಪಿ ನ್ಯೂಸ್) ಆಸ್ತಿ ಲಪಟಾಯಿಸುವ ಉದ್ದೇಶದಿಂದ ಸುಳ್ಳು , ಫೋರ್ಜರಿ ದಾಖಲೆ ಸೃಷ್ಟಿಸಿ ವಂಚಿಸಿದ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ,ಸೂಡಾ ಗ್ರಾಮದ ಆಶ್ರಯ ಕಾಲೋನಿ ನಿವಾಸಿ ಶ್ರೀಮತಿ ಭಾಗೀರಥಿ (೫೨) ಇವರ ತಂದೆ ಮಾಯಿಲ ಅಸ್ಲರ್ ಇವರಿಗೆ ಕಾರ್ಕಳ ತಾಲೂಕು ಸೂಡಾ ಗ್ರಾಮದಲ್ಲಿ ಸರ್ವೆ ನಂಬ್ರ 224/1 ರಲ್ಲಿ 2 ಎಕ್ರೆ 26 ಸೆಂಟ್ಸ್ ಜಾಗ ಸಾಗುವಳಿ ಚೀಟಿ ಮೂಲಕ ಮಂಜೂರಾಗಿದ್ದು, ಮಾಯಿಲ ಅಸ್ಲರ್ ರವರು ಜೀವಿತ ಕಾಲದಲ್ಲಿ ಜಾಗವನ್ನು ಯಾವುದೇ ದಾಖಲೆಗಳನ್ನು ಮಾಡಿಸದೇ ದಿನಾಂಕ 10/05/1979 ರಂದು ಮೃತಪಟ್ಟಿದ್ದು, ಭಾಗೀರಥಿ ಅವರ ತಮ್ಮ ಶಂಕರ ಮೇರ ಭಾಗೀರಥಿರವರಿಗೆ ಮತ್ತು ಅವರ ಉಳಿದ ಸಹೋದರಿಯರಾದ ಭವಾನಿ, ಗುಲಾಬಿ, ವಿನೋದ ಇವರುಗಳಿಗೆ ಮೋಸ ಮತ್ತು ವಂಚನೆ ಎಸಗುವ ಉದ್ದೇಶದಿಂದ ತನ್ನ ತಂದೆ, ತಾಯಿಯವರಿಗೆ ತಾನೊಬ್ಬನೇ ವಾರಸುದಾರ ಎಂದು ಊರಿನ ಸ್ಥಳೀಯರ ಜೊತೆ ಸೇರಿ ಸುಳ್ಳು ದಾಖಲೆಯನ್ನು ಸೃಷ್ಠಿಸಿ ಭಾಗೀರಥಿ ಮತ್ತು ಅವರ ಸಹೋದರಿಯರ ಹಕ್ಕಿನ ಆಸ್ತಿಯನ್ನು ಲಪಟಾಯಿಸಿ ಮೋಸ ಮಾಡಿರುತ್ತಾರೆ ಎಂದು ಭಾಗೀರಥಿ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.