IMG_20260119_100950.jpg
Spread the love

ದಿನಾಂಕ:19-01-2026 (ಹಾಯ್ ಉಡುಪಿ ನ್ಯೂಸ್)

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಬಿಗ್ ಬಾಸ್ ದೊಡ್ಮನೆಯ ಆಟಕ್ಕೆ ಭಾನುವಾರ ರಾತ್ರಿ ತೆರೆ ಬಿದಿದ್ದು, ಗಿಲ್ಲಿ ನಟರಾಜ್ ಈ ಬಾರಿಯ‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಆಗಿದ್ದು, ರಕ್ಷಿತಾ ರನ್ನರ್ ಅಪ್ ಆಗಿದ್ದಾರೆ. ಅಶ್ವಿನಿ ಗೌಡ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ.

ಈ ಬಾರಿಯ ಬಿಗ್‌‌ಬಾಸ್‌ ಸೀಸನ್‌ 12 ಗೆದ್ದ ಗಿಲ್ಲಿಗೆ 50 ಲಕ್ಷ ರೂಪಾಯಿ ಕ್ಯಾಶ್‌ ಪ್ರೈಸ್‌ ಜೊತೆ ಭರ್ಜರಿ ಗಿಫ್ಟ್‌ ಕೂಡ ಸಿಕ್ಕಿದೆ.ಈ ಬಾರಿ ಬಿಗ್‌ಬಾಸ್‌ 12 ಗೆದ್ದವರಿಗೆ ಕ್ಯಾಶ್‌ ಪ್ರೈಸ್‌ ಜೊತೆ ಮಾರುತಿ ಸುಜುಕಿ ವಿಕ್ಟೋರಿಸ್‌ ಕಾರು ಕೂಡ ಉಡುಗೊರೆಯಾಗಿ ನೀಡಲಾಗಿದೆ.ರನ್ನರ್ ಅಪ್ ರಕ್ಷಿತಾ ಅವರು ಇಪ್ಪತ್ತೈದು ಲಕ್ಷ ನಗದು ಪಡೆದುಕೊಂಡಿದ್ದಾರೆ.

ಈ ಬಾರಿಯ ಸೀಸನ್‌ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಕಳೆದೆಲ್ಲಾ ಸೀಸನ್‌‌ಗಳಿಗಿಂತ ಈ ಸೀಸನ್‌ ಕಂಟೆಸ್ಟೆಂಟ್‌ಗಳಿಗೆ ಹೆಚ್ಚಿನ ಜನ ಬೆಂಬಲ ಸಿಕ್ಕಿದೆ. ಅದರಲ್ಲೂ ಗಿಲ್ಲಿಗೆ ಸಿಕ್ಕಿರೋ ಸಪೋರ್ಟ್‌ ಈ ಹಿಂದೆ ಯಾರಿಗೂ ಸಿಕ್ಕಿಲ್ಲ ಅನ್ಸುತ್ತೆ. ಅಷ್ಟರಮಟ್ಟಿಗೆ ಗಿಲ್ಲಿ ಎಲ್ಲರನ್ನ ಸೆಳೆದುಕೊಂಡು ಬಿಟ್ಟಿದ್ದರು.

ಎರಡನೇ ರನ್ನರ್ ಅಪ್ ಆದ ಅಶ್ವಿನಿ ಅವರಿಗೆ 14 ಲಕ್ಷ ರೂಪಾಯಿ ಹಾಗೂ ಬಿಗ್​​ಬಾಸ್ ಫಿನಾಲೆಯಿಂದ ನಾಲ್ಕನೇ ಸ್ಪರ್ಧಿಯಾಗಿ ಹೊರಗೆ ಹೋದ ಕಾವ್ಯಾ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.

ಈ ಸೀಸನ್​​ನಲ್ಲಿ ಒಟ್ಟು 24 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಿದ್ದರು. ಅಂತಿಮವಾಗಿ 6 ಸ್ಪರ್ಧಿಗಳು ಫಿನಾಲೆಗೆ ಬಂದಿದ್ದರು. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ಕಾವ್ಯಾ ಶೈವ, ಧನುಷ್ ಹಾಗೂ ಗಿಲ್ಲಿ ನಟ ಫಿನಾಲೆ ತಲುಪಿದ್ದರು.

error: No Copying!