images-16.jpeg
Spread the love

ಬಿಗ್ ಬಾಸ್ ಎಂಬ ಕಾರ್ಯಕ್ರಮ ಕೆರಳಿಸಿದ್ದ ಉದ್ವೇಗದ ಕಾತುರತೆ ಈ ಸಮಾಜದ ಮೌಲ್ಯಗಳ ಕುಸಿತದ ಒಂದು ಉದಾಹರಣೆ ಅಷ್ಟೇ. ಇರಲಿ ಬದಲಾವಣೆ ಜಗದ ನಿಯಮ. ಆದರೆ ಆ ಬದಲಾವಣೆ ಪ್ರಗತಿಪರವಾಗಿರಲಿ, ಪ್ರಭುದ್ಧವಾಗಿರಲಿ, ಜೀವನಮಟ್ಟ ಸುಧಾರಣೆಯತ್ತ ಇರಲಿ, ನೆಮ್ಮದಿಯ ಬದುಕಿನತ್ತ ಸಾಗಲಿ ಎಂದು ಆಶಿಸುತ್ತಾ……

ಬಹುತೇಕ ನಮ್ಮ ದಿನನಿತ್ಯದ ಚಟುವಟಿಕೆಗಳು ಪ್ರಕ್ಷುಬ್ಧವಾಗಿಯೇ ಸಾಗುತ್ತಿದೆ. ದೇಹ ಮತ್ತು ಮನಸ್ಸುಗಳು ಅವಿಶ್ರಾಂತವಾಗಿ ಕೆಲಸ ಮಾಡುತ್ತಿರುತ್ತದೆ. ಈ ಸಂದರ್ಭದಲ್ಲಿ ಮೌನ ಎಂಬ ಭಾವನೆಯೊಂದಿದೆ ಎಂದು ನೆನಪಿಸಿಕೊಳ್ಳುತ್ತಾ, ಅದು ಕೂಡ ಎರಡು ಕತ್ತಿನ ಹಲಗೆ……

ಇದೆಲ್ಲವನ್ನೂ ಮೀರಿದ್ದು ಸಾಮಾನ್ಯ ಜ್ಞಾನ. ಯಾವ ಸಂದರ್ಭದಲ್ಲಿ, ಯಾವ ಭಾವನೆ, ಎಷ್ಟು ಮತ್ತು ಯಾವ ರೀತಿಯಲ್ಲಿ ವ್ಯಕ್ತಪಡಿಸಬೇಕು ಎಂಬುದರ ಮೇಲೆ ನಮ್ಮ ಚಿಂತನೆಯ ಗುಣಮಟ್ಟ ಅಡಗಿರುತ್ತದೆ. ಅದರ ಮೇಲೆ ನಿಯಂತ್ರಣ ಸಾಧಿಸಬೇಕಾದ್ದು ಈ ಕ್ಷಣದ ಅನಿವಾರ್ಯತೆ……

ಮೌನವೆಂಬುದೊಂದು ಧ್ಯಾನ,
ಮೌನವೆಂಬುದೊಂದು ನರಕ………

ಮೌನ ಒಂದು ಅಗಾಧ ಶಕ್ತಿ,
ಮೌನ ಒಂದು ದೌರ್ಬಲ್ಯ……..

ಮೌನ ನಿನ್ನೊಳಗಿನ ಆತ್ಮ,
ಮೌನ ನಿನ್ನ ಸಾವು ಕೂಡ……

ಮೌನಕ್ಕಿದೆ ಸಾವಿರ ಭಾಷೆಗಳ ಅರ್ಥ,
ಮೌನ ಒಂದು ನಿರ್ಲಿಪ್ತ ಬಾವ……….

ಮೌನವೊಂದು ದಿವ್ಯಶಕ್ತಿ,
ಮೌನವೊಂದು ಅಸಹಾಯಕ ಸ್ಥಿತಿ…………

ಮೌನ ಸಹಿಷ್ಣುತೆ,
ಮೌನ ಅಸಹನೀಯತೆ……

ಮೌನ ಜೀವನೋತ್ಸಾಹದ ಕುರುಹು,
ಮೌನ ಅವಸಾನದ ಮುನ್ಸೂಚನೆ……..

ಮೌನಿಯ ಮನಸ್ಸು ಕರುಣಾಮಯಿ,
ಮೌನಿಯ ಕಣ್ಣುಗಳು ಕ್ರೌರ್ಯದ ಪ್ರತಿಫಲನ……

ಮೌನಿಗೆ ಶತೃಗಳೇ ಇಲ್ಲ,
ಮೌನಿಗೆ ಮಿತ್ರರೂ ಇಲ್ಲ………..

ಮೌನಕ್ಕೂ ಒಂದು ಭಾಷೆ ಇದೆ,
ಮೌನವು ನಿರ್ಜೀವ ನಿರ್ವಿಕಾರ ಮನಸ್ಥಿತಿ……..

ಮೌನದ ನಗು ತುಟಿ ಅಂಚಿನ ಪಳಪಳ ಹೊಳೆಯುವ ಆಕರ್ಷಣೆ,
ಮೌನದ ಅಳು ಅಂತರಾಳದ ಮೂಕ ರೋದನೆ………

ಮೌನಿ ಒಬ್ಬ ದಾರ್ಶನಿಕ,
ಮೌನಿ ಒಬ್ಬ ಹುಚ್ಚ……

ಮೌನ ಕುತೂಹಲ ಕೆರಳಿಸುತ್ತದೆ,
ಮೌನ ನಿರ್ಲಕ್ಷ್ಯಕ್ಕೊಳಗಾಗುತ್ತದೆ…….

ಮೌನ ಪ್ರಬುದ್ದತೆಯ ಲಕ್ಷಣ,
ಮೌನ ದಡ್ಡತನದ ಸಂಕೇತ…….

ಮೌನ ಪ್ರೀತಿಯನ್ನು ಗೆಲ್ಲುತ್ತದೆ,
ಮೌನ ಪ್ರೀತಿಯನ್ನು ಕೊಲ್ಲುತ್ತದೆ……

ಮೌನದಿಂದ ಅನೇಕ ಸಮಸ್ಯೆಗಳು ತನ್ನಿಂದ ತಾನೇ ಬಗೆಹರಿಯುತ್ತದೆ,
ಮೌನದಿಂದ ಇಲ್ಲದ ಸಮಸ್ಯೆಗಳು ಸೃಷ್ಟಿಯಾಗುತ್ತವೆ……

ಮೌನ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.

error: No Copying!