IMG_20260116_213039.jpg
Spread the love

ಕಾರ್ಕಳ: ದಿನಾಂಕ:16-01-2026 (ಹಾಯ್ ಉಡುಪಿ ನ್ಯೂಸ್)ಮುಡಾರು ಗ್ರಾಮದ ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬಾಗಿಲಿನ ಬೀಗ ಮುರಿದ ಕಳ್ಳನೋರ್ವ ಸೊಸೈಟಿಯ ಒಳಹೊಕ್ಕು ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ನಡೆದಿದೆ.

ಹಿರ್ಗಾನ ಗ್ರಾಮದ ತುಂಬೆ ಹಿತ್ಲು ನಿವಾಸಿ  ಕಿಶೋರ್ ಶೆಟ್ಟಿ, ಪ್ರಾಯ 29 ವರ್ಷ ಎಂಬವರು  ಬಂಟ್ಸ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿ, ಕಾರ್ಕಳ ಇದರ ಮುಖ್ಯ ನಿರ್ವಹಣಾಧಿಕಾರಿಯಾಗಿದ್ದು,  ಸೊಸೈಟಿಯ ಶಾಖೆಯು ಕಾರ್ಕಳ ತಾಲೂಕು ಮುಡಾರು ಗ್ರಾಮದ ಸುಮ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ ಇದ್ದು,  ದಿನಾಂಕ 16/01/2025 ರಂದು ಬೆಳಿಗ್ಗೆ 09;30 ಗಂಟೆಗೆ  ಸೊಸೈಟಿ ಶಾಖೆಯ ಸಿಬ್ಬಂಧಿ ಸೃಜ್ಞಾ ಎಂಬವರು ಕಿಶೋರ್ ಶೆಟ್ಟರಿಗೆ ಫೋನ್ ಮಾಡಿ ತಾವು ಈ ದಿನ ಸೊಸೈಟಿ ಶಾಖೆಯ ಬಾಗಿಲು ತೆರೆಯಲು ಬಂದಾಗ ಬಾಗಿಲಿಗೆ ಹಾಕಿದ ಲಾಕ್ ಮುರಿದಿರುವುದಾಗಿ ತಿಳಿಸಿದ್ದರು .

ಕಿಶೋರ್ ಶೆಟ್ಟಿ ರವರು ಕಾರ್ಕಳದ ಪ್ರಧಾನ ಕಛೇರಿಯಲ್ಲಿ ಬಜಗೋಳಿ ಶಾಖೆಯ ಸಿಸಿ ಕೆಮರಾದ ರೆಕಾರ್ಡನ್ನು ಪರಿಶೀಲಿಸಿದಾಗ  ದಿನಾಂಕ 16/01/2026 ರಂದು ಬೆಳಗ್ಗಿನ ಜಾವ ಕಳ್ಳನೊಬ್ಬ ಆಯುಧದಿಂದ ಸೊಸೈಟಿಯ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳಪ್ರವೇಶಿಸಿ ಸೊಸೈಟಿಯ ಒಳಗೆ ಹುಡುಕಾಡಿ ಕಳವುಮಾಡಲು ಪ್ರಯತ್ನಿಸಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕಾರ್ಕಳ ಪೊಲೀಸ್‌ ಠಾಣೆಯಲ್ಲಿ  ಕಲಂ 331(2). 305 ,62 ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದೆ.

error: No Copying!