IMG-20260116-WA0041.jpg
Spread the love

ದಿನಾಂಕ:16-01-2026(ಹಾಯ್ ಉಡುಪಿ ನ್ಯೂಸ್)

ಶೀರೂರು ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ಸರ್ವ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಉಡುಪಿ ಜನತೆಯ ಸಹಕಾರದಿಂದ ಅತ್ಯಂತ ವ್ಯವಸ್ಥಿತ ಹಾಗೂ ವೈಭವಯುತವಾಗಿ ಶ್ರದ್ಧಾ ಭಕ್ತಿಯಿಂದ ನಡೆಸಲು ಪೊಡವಿಗೊಡೆಯ ಶ್ರೀಕೃಷ್ಣನ ನಗರಿ ಉಡುಪಿ ಸಜ್ಜಾಗಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷರಾದ ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.

ಸುಮಾರು 2 ಲಕ್ಷ್ಮಕ್ಕೂ ಮಿಕ್ಕಿ ಭಕ್ತರು ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಜನವರಿ 17 ರಾತ್ರಿ ಕೂಡಾ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

5 ಮಂದಿ ಸಾಧಕರಿಗೆ ಶೀರೂರು ಪರ್ಯಾಯ ದರ್ಬಾರ್ ಕೃಷ್ಣಾನುಗ್ರಹ ಪ್ರಶಸ್ತಿ

ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಸಾಧಕ ಗಣ್ಯರಿಗೆ ಶೀರೂರು ಶ್ರೀಪಾದರು ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ

ಜನವರಿ 17 ರಂದು ಪುತ್ರಿಗೆ ಶ್ರೀಗಳಿಗೆ ಅಭಿನಂದನಾ ಕಾರ್ಯಕ್ರಮ

ಶೀರೂರು ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ತಮ್ಮ ಚತುರ್ಥ ಪರ್ಯಾಯ ಮಹೋತ್ಸವವನ್ನು ಯಶಸ್ವಿಯಾಗಿ ಪೂರೈಸಿದ ಪರ್ಯಾಯ ಪುತ್ತಿಗೆ ಮಠದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಸುಶ್ರೀಂದ್ರ ತೀರ್ಥ ಶ್ರೀಪಾದರಿಗೆ ಸಂಜೆ 4.30 ಗಂಟೆಗೆ ರಥಬೀದಿಯ ಪೂರ್ಣ ಪ್ರಜ್ಞಾ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶಾಸಕ ಯಶ್ ಪಾಲ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮಗಳ ವಿವರ

ಪ್ರಾತಃ ಕಾಲ 1.15 ಗಂಟೆ :ಕಾಪು ಸಮೀಪದ ದಂಡತೀರ್ಥದಲ್ಲಿ ಪವಿತ್ರ ಸ್ನಾನ

ಪ್ರಾತಃ ಕಾಲ 2.00 ಗಂಟೆ: ಜೋಡುಕಟ್ಟೆಯಿಂದ ವೈಭವದ ಪರ್ಯಾಯ ಮೆರವಣಿಗೆ ಪ್ರಾರಂಭ

ಬೆಳಿಗ್ಗೆ 5.15 ಗಂಟೆ : ಕನಕನ ಕಿಂಡಿಯಲ್ಲಿ ಶ್ರೀಕೃಷ್ಣ ದರ್ಶನ, ಶ್ರೀ ಚಂದ್ರಮೌಳೀಶ್ವರ,
ಶ್ರೀ ಅನಂತೇಶ್ವರ ದರ್ಶನ,

ಬೆಳಿಗ್ಗೆ 5:45 ಗಂಟೆ :ಪೂಜ್ಯ ಶ್ರೀ ಶೀರೂರು ಶ್ರೀಪಾದಂಗಳವರಿಂದ
ಶ್ರೀ ಸರ್ವಜ್ಞಪೀಠಾರೋಹಣ,

ಬೆಳಿಗ್ಗೆ 5:55 ಗಂಟೆ :ಬಡಗು ಮಾಳಿಗೆಯ ಅರಳು ಗದ್ದುಗೆಯಲ್ಲಿ
ಸಾಂಪ್ರದಾಯಿಕ ದರ್ಬಾರ್ ಹಾಗೂ ಅಷ್ಟ ಮಠಾಧೀಶರಿಗೆ ಮಾಲಿಕೆ ಮಂಗಳಾರತಿ

ಬೆಳಿಗ್ಗೆ 6.15 ಗಂಟೆ : ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಕಾರ್ಯಕ್ರಮ ಆಮಂತ್ರಿತ
ಅಷ್ಟಮಠಾಧೀಶರಿಂದ ಹಾಗೂ ಪರ್ಯಾಯ ಪೀಠಾಧೀಶರಿಂದ
ಅನುಗ್ರಹ ಸಂದೇಶ

ಬೆಳಿಗ್ಗೆ ಗಂಟೆ 10.30ಕ್ಕೆ ಶ್ರೀಕೃಷ್ಣ ದೇವರ ಮಹಾಪೂಜೆ, ಪಲ್ಲಪೂಜೆ.


ಜನವರಿ 17ರ ರಾತ್ರಿಯೂ 40ಸಾವಿರ ಮಂದಿಗೆ ಭೋಜನ ಪ್ರಸಾದ

ಶೀರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಜನವರಿ 17 ರಾತ್ರಿ 7.30 ರಿಂದ ವಿಶೇಷ ಅನ್ನ ಸಂತರ್ಪಣೆ ಸ್ಥಳ : ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ನಗರಸಭಾ ಕಚೇರಿ ಬಳಿ ಉಡುಪಿ ಮತ್ತು ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ.

ಜನವರಿ 18 ಮುಂಜಾನೆ 2.00 ಗಂಟೆಯಿಂದ ವೈಭವದ ಪರ್ಯಾಯ ಮೆರವಣಿಗೆ ಪ್ರಾರಂಭ.

ಜನವರಿ 18 ಮುಂಜಾನೆ 2.00 ಗಂಟೆಯಿಂದ ಉಡುಪಿ ಜೋಡುಕಟ್ಟೆಯಿಂದ ಶ್ರೀಕೃಷ್ಣಮಠಕ್ಕೆ ಸುಮಾರು 85 ಕ್ಕೂ ಅಧಿಕ ವಿವಿಧ ರಾಜ್ಯಗಳ ಕಲಾ ತಂಡಗಳು, ವೈವಿಧ್ಯಮಯ ಆಕರ್ಷಕ ಸ್ತಬ್ಧ ಚಿತ್ರಗಳನ್ನೊಳಗೊಂಡ ವೈಭವದ ಪರ್ಯಾಯ ಮೆರವಣಿಗೆ ಸಾಗಿ ಬರಲಿದೆ.

ಜನವರಿ 18 ಪೂರ್ವಾಹ್ನ 11.30 ರಿಂದಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ 50 ಸಾವಿರ ಮಂದಿಗೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ

ಜನವರಿ 18 ಬೆಳಿಗ್ಗೆ 6.00 ಗಂಟೆಗೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಸಭಾ ಕಾರ್ಯಕ್ರಮ

ಉಪಸ್ಥಿತಿ:

ಪರಮಪೂಜ್ಯ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಪರ್ಯಾಯ ಶ್ರೀ ಶೀರೂರು ಮಠ,

ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಶ್ರೀ ಕೃಷ್ಣಾಪುರ ಮಠ

ಪರಮಪೂಜ್ಯ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀ ಪಲಿಮಾರುಮಠ, ಹಿರಿಯ ಪಟ್ಟ

ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶ್ರೀ ಪೇಜಾವರಮಠ

ಪರಮಪೂಜ್ಯ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಶ್ರೀ ಕಾಣಿಯೂರು ಮಠ

ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಶ್ರೀ ಸೋದೆ ಮಠ

ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀ ಅದಮಾರು ಮಠ – ಕಿರಿಯ ಪಟ್ಟ

ಪರಮಪೂಜ್ಯ ಶ್ರೀ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಶ್ರೀ ಪಲಿಮಾರು ಮಠ – ಕಿರಿಯ ಪಟ್ಟ

ಗೌರವ ಉಪಸ್ಥಿತಿ: ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ
ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಗೌರವಾಧ್ಯಕ್ಷರು, ಪರ್ಯಾಯ ಸ್ವಾಗತ ಸಮಿತಿ

ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಹಾರಾಜರು, ಮೈಸೂರು ಸಂಸ್ಥಾನ

ಶ್ರೀ ಎಚ್. ಡಿ. ಕುಮಾರಸ್ವಾಮಿ ಕೇಂದ್ರ ಸಚಿವರು, ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯ, ಭಾರತ ಸರಕಾರ

ಶ್ರೀ ಡಿ. ಕೆ. ಶಿವಕುಮಾರ್ ಮಾನ್ಯ ಉಪ ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ
ಶ್ರೀ ಜಿ. ಪರಮೇಶ್ವರ್ ಗೃಹ ಸಚಿವರು, ಕರ್ನಾಟಕ ಸರ್ಕಾರ

ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳ್ಳರ್, ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಕರ್ನಾಟಕ ಸರಕಾರ
ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಉಡುಪಿ ಜಿಲ್ಲೆ

ಶ್ರೀ ಬಿ. ವೈ. ವಿಜಯೇಂದ್ರ ಶಾಸಕರು, ರಾಜ್ಯಾಧ್ಯಕ್ಷರು, ಬಿಜೆಪಿ, ಕರ್ನಾಟಕ

ಶ್ರೀ ಕೋಟ ಶ್ರೀನಿವಾಸ ಪೂಜಾರಿ ಸಂಸದರು, ಉಡುಪಿ-ಚಿಕ್ಕಮಗಳೂರು

ಶ್ರೀ ಸುನಿಲ್ ಕುಮಾರ್ ಶಾಸಕರು, ಕಾರ್ಕಳ

ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಶಾಸಕರು,ಕಾಪು

ಶ್ರೀ ಕಿರಣ್ ಕುಮಾರ್ ಕೊಡ್ಲಿ ಶಾಸಕರು, ಕುಂದಾಪುರ

ಶ್ರೀ ಪ್ರಮೋದ್ ಮಧ್ವರಾಜ್ ಮಾಜಿ ಸಚಿವರು, ಕರ್ನಾಟಕ ಸರಕಾರ

ಶ್ರೀಮತಿ ಸ್ವರೂಪ ಟಿಕೆ. ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ.

ಡಾ ಎಚ್. ಎಸ್. ಬಲ್ಲಾಳ್,
ಸಹ ಕುಲಾಧಿಪತಿ, ಮಾಜಿ, ಮಣಿಪಾಲ್

ಶ್ರೀ ರಂಜನ್ ಪೈ ಅಧ್ಯಕ್ಷರು, ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ

ನಾಡೋಜ ಡಾ ಜಿ. ಶಂಕರ್ ಪ್ರವರ್ತಕರು, ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಅಂಬಲಪಾಡಿ

ಶ್ರೀ ಪ್ರಕಾಶ್ ಶೆಟ್ಟಿ ಅಧ್ಯಕ್ಷರು, ಎಂ. ಆರ್. ಜಿ. ಗ್ರೂಪ್

ಡಾ ಎಂ. ಮೋಹನ್ ಆಳ್ವ, ಆಳ್ವಾಸ್ ಶಿಕ್ಷಣ ಸಂಸ್ಥೆ, ಮೂಡಬಿದರೆ

ಡಾ ಎಂ. ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷರು, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್

ಡಾ ಪ್ರತಾಪ್ ಮಧುಕರ್ ಕಾಮತ್ ಎಂ.ಡಿ, ಆಭರಣ ಟೈಮ್ ಲೆಸ್ ಜುವೆಲ್ಲರಿ ಪ್ರೈ.ಲಿ, ಬೆಂಗಳೂರು

ಶ್ರೀ ಹರಿದೀಪ ಸಿಂಗ್ ಅಹ್ಲುವಾಲಿಯಾ ಎಂ.ಡಿ. ಮತ್ತು ಸಿಇಓ, ಕೆನರಾ ಬ್ಯಾಂಕ್

ಶ್ರೀ ಚಂಚಲಪತಿ ದಾಸ್ ಉಪಾಧ್ಯಕ್ಷರು, ಇಸ್ಕಾನ್, ಬೆಂಗಳೂರು

ಶ್ರೀ ಕಿಶೋರ್ ಆಳ್ವ ಕಾರ್ಯನಿರ್ವಾಹಕ ನಿರ್ದೇಶಕರು, ಅದಾನಿ ಗ್ರೂಪ್

ಶ್ರೀ ವಿಷ್ಣು ಶರಣ್ ಭಟ್ ಎಂ.ಡಿ., ಭೀಮ ಗೋಲ್ಡ್ ಪ್ರೈ.ಲಿ., ಬೆಂಗಳೂರು

ಶ್ರೀ ರಾಘವೇಂದ್ರ ಎಸ್. ಭಟ್ ಎಂ.ಡಿ. ಮತ್ತು ಸಿಇಓ, ಕರ್ನಾಟಕ ಬ್ಯಾಂಕ್

ಶ್ರೀ ಮಧು ಪಂಡಿತ್ ದಾಸ್ ಅಧ್ಯಕ್ಷರು, ಇಸ್ಕಾನ್, ಬೆಂಗಳೂರುಶ್ರೀ ರಾಮದಾಸ್ ಮಡ್ಮಣ್ಣಾಯ ಎಂ.ಡಿ., ಏಸ್ ಡಿಸೈನರ್ಸ್, ಬೆಂಗಳೂರು

ಶ್ರೀ ರಾಮದಾಸ್ ಮಡ್ಮಣ್ಣಾಯ ಎಂ.ಡಿ., ಏಸ್ ಡಿಸೈನರ್ಸ್, ಬೆಂಗಳೂರು

ಶ್ರೀ ಶೀರೂರು ಪರ್ಯಾಯ
ಜನವರಿ 18 ರಿಂದ ಜನವರಿ 27 ವರೆಗೆ ಧಾರ್ಮಿಕ ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು | ಸ್ಥಳ: ರಾಜಾಂಗಣ, ಉಡುಪಿ

ದಿನಾಂಕ: 18 ಜನವರಿ, 2026ರ ಭಾನುವಾರ : ಬೆಳಿಗ್ಗೆ 4.00 ಗಂಟೆಗೆ: “ನಾದಸ್ವರ ವಾದನ ಮತ್ತು ವಯೋಲಿನ್” ವಿದ್ವಾನ್ ಮೈಲೈ ಎಂ. ಕಾರ್ತಿಕೇಯನ್, ವಿದುಷಿ ಶ್ರೇಯಾ ದೇವನಾಥ್ ಮತ್ತು ಬಳಗ, ಚೆನ್ನೈ, ಸಂಜೆ 6.00 ಗಂಟೆಗೆ: “ಧಾರ್ಮಿಕ ಪ್ರವಚನ”, ರಾತ್ರಿ 8.00 ಗಂಟೆಗೆ: “ನಾಮಸಂಕೀರ್ತನೆ”- ಭಾರತ ಕಲಾ ಚೂಡಾಮಣಿ ವಿದುಷಿ ಶಿವಶ್ರೀ ತೇಜಸ್ವಿ ಸೂರ್ಯ ಮತ್ತು ಬಳಗ, ಬೆಂಗಳೂರು

ದಿನಾಂಕ: 19 ಜನವರಿ, 2026ರ ಸೋಮವಾರ: ಸಂಜೆ 6.00 ಗಂಟೆಗೆ: ‘ಧಾರ್ಮಿಕ ಪ್ರವಚನ”, ರಾತ್ರಿ 8.00 ಗಂಟೆಗೆ: “ಅಭಂಗ್ ವಾರಿ” – ರಾಷ್ಟ್ರೀಯ ಚಲನಚಿತ್ರ ಗಾಯಕ ಪ್ರಶಸ್ತಿ ವಿಜೇತರಾದ ಪಂಡಿತ್ ಶ್ರೀ ಮಹೇಶ್ ಕಾಳೆ ಮತ್ತು ಬಳಗ, ಪುಣೆ

ದಿನಾಂಕ: 20 ಜನವರಿ, 2026ರ ಮಂಗಳವಾರ: ಸಂಜೆ 6.00 ಗಂಟೆಗೆ: “ಧಾರ್ಮಿಕ ಪ್ರವಚನ”, ರಾತ್ರಿ 8.00 ಗಂಟೆಗೆ: “ವೇಣು ವಾದನ” ಕಲೈಮಾಮಣಿ ವಿದ್ವಾನ್ ಶ್ರೀ ಶಶಾಂಕ್ ಸುಬ್ರಹ್ಮಣ್ಯಂ ಮತ್ತು ತಂಡ, ಚೆನ್ನೈ

ದಿನಾಂಕ: 21 ಜನವರಿ, 2026ರ ಬುಧವಾರ: ಸಂಜೆ 6.00 ಗಂಟೆಗೆ:
‘ಧಾರ್ಮಿಕ ಪ್ರವಚನ”, ರಾತ್ರಿ 8.00 ಗಂಟೆಗೆ: ‘ಭಕ್ತಿ ಸಿಂಚನ” – ಬಹುಭಾಷಾ ಚಲನಚಿತ್ರ ಗಾಯಕರಾದ ವಿದ್ವಾನ್ ಶ್ರೀ ವಿಜಯಪ್ರಕಾಶ್ ಮತ್ತು ಬಳಗ, ಬೆಂಗಳೂರು

ದಿನಾಂಕ: 22 ಜನವರಿ, 2026ರ ಗುರುವಾರ: ಸಂಜೆ 6.00 ಗಂಟೆಗೆ:
‘ಧಾರ್ಮಿಕ ಪ್ರವಚನ”, ರಾತ್ರಿ 8.00 ಗಂಟೆಗೆ: ”ಭರತನಾಟ್ಯಮ್” – ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ವಿದ್ವಾನ್ ಶ್ರೀ ಪಾರ್ಶ್ವನಾಥ ಉಪಾಧ್ಯೆ ಮತ್ತು ಬಳಗ, ಬೆಂಗಳೂರು

ದಿನಾಂಕ: 23 ಜನವರಿ, 2026ರ ಶುಕ್ರವಾರ: ಸಂಜೆ 6.00 ಗಂಟೆಗೆ “ಧಾರ್ಮಿಕ ಪ್ರವಚನ”, ರಾತ್ರಿ 8.00 ಗಂಟೆಗೆ: “ಯಕ್ಷಗಾನ ಪ್ರಸಂಗ – ನಳ ದಮಯಂತಿ” ದಕ್ಷಿಣೋತ್ತರ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ

ದಿನಾಂಕ: 24 ಜನವರಿ, 2026ರ ಶನಿವಾರ: ಸಂಜೆ 6.00 ಗಂಟೆಗೆ “ಧಾರ್ಮಿಕ ಪ್ರವಚನ”, ರಾತ್ರಿ 8.00 ಗಂಟೆಗೆ: “ಕರ್ನಾಟಕ ಶಾಸ್ತ್ರೀಯ ಸಂಗೀತ”- ಸಂಗೀತ ಚೂಡಾಮಣಿ ವಿದುಷಿಯರಾದ ಶ್ರೀಮತಿ ರಂಜನಿ ಗಾಯತ್ರಿ ಮತ್ತು ಬಳಗ, ಚೆನ್ನೈ,

ದಿನಾಂಕ: 25 ಜನವರಿ, 2026ರ ಭಾನುವಾರ: ಸಂಜೆ 6.00 ಗಂಟೆಗೆ: “ಧಾರ್ಮಿಕ ಪ್ರವಚನ”, ರಾತ್ರಿ 8.00 ಗಂಟೆಗೆ: ”ಕರ್ನಾಟಕ ಶಾಸ್ತ್ರೀಯ ಸಂಗೀತ” – ಅಂತರಾಷ್ಟ್ರೀಯ ಪ್ರಖ್ಯಾತ ಕಲಾವಿದರಾದ ವಿದ್ವಾನ್ ಶ್ರೀ ಸಂದೀಪ್ ನಾರಾಯಣ್ ಮತ್ತು ಬಳಗ, ಚೆನ್ನೈ

ದಿನಾಂಕ: 26 ಜನವರಿ, 2026ರ ಸೋಮವಾರ: ಸಂಜೆ 6.00 ಗಂಟೆಗೆ: “ಧಾರ್ಮಿಕ ಪ್ರವಚನ”, ರಾತ್ರಿ 8.00 ಗಂಟೆಗೆ: ”ದ್ವಂದ್ವ ವಯಲಿನ್ ವಾದನ” ಸಂಗೀತ ಕಲಾನಿಧಿ ವಿದ್ವಾನ್ ಶ್ರೀ ಲಾಲ್ಗುಡಿ ಕೃಷ್ಣನ್, ಸಂಗೀತ ಕಲಾನಿಧಿ ವಿದುಷಿ ಲಾಲ್ಗುಡಿ ವಿಜಯಲಕ್ಷ್ಮೀ ಮತ್ತು ಬಳಗ, ಚೆನ್ನೈ.

ದಿನಾಂಕ: 27 ಜನವರಿ, 2026ರ ಮಂಗಳವಾರ: ಸಂಜೆ 6.00 ಗಂಟೆಗೆ: “ಧಾರ್ಮಿಕ ಪ್ರವಚನ”, ರಾತ್ರಿ 8.00 ಗಂಟೆಗೆ:
”ನೃತ್ಯ ನಾಟಕ – ಶ್ರೀ ಮಧ್ವಾಚಾರ್ಯರು”, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರಾದ ವಿದ್ವಾನ್ ಶ್ರೀ ಪ್ರವೀಣ್ ಕುಮಾರ್ ಮತ್ತು ಬಳಗ, ಬೆಂಗಳೂರು.

error: No Copying!