ಉಡುಪಿ: ಮೇ ೧(ಹಾಯ್ ಉಡುಪಿ ನ್ಯೂಸ್) ನಗರದ ಕಲ್ಸಂಕ ಜಂಕ್ಷನ್ ಬಳಿ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ ವಾಹನ ಕಳ್ಳತನ ವಾಗಿರುವ ಬಗ್ಗೆ ದೂರು ದಾಖಲಾಗಿದೆ.
ಕಾಜಾರಗುತ್ತು , ಹಿರಿಯಡ್ಕ ನಿವಾಸಿ ಸುಬ್ರಹ್ಮಣ್ಯ ನಾಯಕ್ (೩೮) ಅವರು ತಮ್ಮ 20,000 ಮೌಲ್ಯದ K A 20 V 6849 ನಂಬ್ರದ ಟಿವಿಎಸ್ ಅಪಾಚಿ ಮೋಟಾರ್ ಸೈಕಲ್ ಅನ್ನು ಉಡುಪಿ ಕಲ್ಸಂಕ ಬಳಿ ಇರುವ ಗೌತಮ್ ಏಜೆನ್ಸಿ ಎದುರು ದಿನಾಂಕ ೨೮-೦೪-೨೨ ರಂದು ಬೆಳಿಗ್ಗೆ ೧೧:೧೫ ಘಂಟೆಗೆ ನಿಲ್ಲಿಸಿದ್ಧು ಬೆಳಿಗ್ಗೆ ೧೧-೫೦ ಘಂಟೆಗೆ ವಾಪಾಸು ಬಂದು ನೋಡಿದಾಗ ದ್ವಿಚಕ್ರ ವಾಹನ ನಿಲ್ಲಿಸಿದ ಜಾಗದಲ್ಲಿ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ನೀಡಿದ್ದು ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದಲ್ಲಿ ಪ್ರತಿನಿತ್ಯ ಎಂಬಂತೆ ದ್ವಿಚಕ್ರ ವಾಹನಗಳ ಕಳ್ಳತನವಾಗುತ್ತಿದ್ದು ವಾಹನ ಕಳ್ಳರ ಒಂದು ತಂಡವೇ ಇದರ ಹಿಂದೆ ಇರುವ ಸಂಶಯ ಬಲವಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಜಾಗ್ರತವಾಗಿ ಆದಷ್ಟು ಶೀಘ್ರ ವಾಹನ ಕಳ್ಳರ ತಂಡವನ್ನು ಬಂಧಿಸಬೇಕಾಗಿದೆ.