ಉಡುಪಿ: ಮೇ೧(ಹಾಯ್ ಉಡುಪಿ ನ್ಯೂಸ್) ಆದಿಉಡುಪಿ ಶಾಲೆಯಲ್ಲಿ ಕರ್ತವ್ಯದಲ್ಲಿರುವಾಗ ತನ್ನ ರೈಫಲ್ ನಿಂದಲೇ ಗುಂಡು ಸಿಡಿದು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ಧ ಡಿ.ಎ.ಆರ್ ಪೊಲೀಸ್ ಸಿಬ್ಬಂದಿ ರಾಜೇಶ್ ಕುಂದರ್ ಸಾವು ಆಕಸ್ಮಿಕವಲ್ಲ ಎಂದು ಇದ್ದ ಸಂಶಯ ಧ್ರಢವಾಗಿದೆ. ರಾಜೇಶ್ ಕುಂದರ್ ಬರೆದಿಟ್ಟಿರುವ ಡೆತ್ ನೋಟ್ ;ಸಾವಿನ ಹಿಂದಿನ ರಹಸ್ಯವನ್ನು ಸಹೋದ್ಯೋಗಿ ಗಣೀಶ್ ಗೆ ಸಿಕ್ಕಿರುವ ಡೆತ್ ನೋಟ್ ಬಿಚ್ಚಿಟ್ಟಿದೆ.
ಉಡುಪಿ ಡಿಎಆರ್ ಘಟಕದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿರುವ ಗಣೇಶ್ , ದಿನಾಂಕ 28/04/2022 ರಂದು ಆದಿ ಉಡುಪಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಉತ್ತರಪತ್ರಿಕೆಯ ಮೌಲ್ಯಮಾಪನ ಕೇಂದ್ರದ ಗಾರ್ಡ್ ಕರ್ತವ್ಯಕ್ಕೆ ಮ್ರತ ರಾಜೇಶ್ ಕುಂದರ್ ಅವರೊಂದಿಗೆ ನಿಯೋಜನೆಗೊಂಡಿದ್ದರು.
ಎಹೆಚ್. ಸಿ ರಾಜೇಶ್ ಕುಂದರ್ ರವರು ದಿನಾಂಕ 29/04/2022 ರಂದು ಬೆಳಿಗ್ಗೆ ಸುಮಾರು 09:00 ಗಂಟೆ ಸಮಯದಲ್ಲಿ ಕರ್ತವ್ಯದಲ್ಲಿರುವಾಗ ಅವರ ಬಳಿಯಿದ್ದ ರೈಫಲ್ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಮೃತಪಟ್ಟಿರುವುದಾಗಿ ಹೆಚ್.ಸಿ ಗಣೇಶ್ ಪ್ರಕರಣದಲ್ಲಿ ಹೇಳಿಕೆ ನೀಡಿದ್ದಲ್ಲದೆ, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಾಥಮಿಕ ಹಂತದಲ್ಲಿ ಆಕಸ್ಮಿಕ ಸಾವು ಎಂದು ಹೇಳಲಾಗಿದ್ದ ಈ ಪ್ರಕರಣದ ಪ್ರಾಥಮಿಕ ತನಿಖೆ ಮುಗಿದ ಬಳಿಕ ಹೆಚ್.ಸಿ ಗಣೇಶ್ ಆದಿ ಉಡುಪಿ ಶಾಲೆಯಲ್ಲಿದ್ದ ತನ್ನ ಬಟ್ಟೆಬರೆ ಇದ್ದ ಬ್ಯಾಗ್ ಮತ್ತು ರೈಫಲ್ ನ್ನು ತೆಗೆದುಕೊಂಡು ಡಿಎಆರ್ ಕೇಂದ್ರ ಸ್ಥಾನಕ್ಕೆ ಹೋಗಿ ಬ್ಯಾಗ ನ್ನು ಕಿಟ್ ಬಾಕ್ಸ್ ನಲ್ಲಿ ಇರಿಸಿ, ರೈಫಲ್ ನ್ನು ಆರ್ಮರ್ ರವರಲ್ಲಿ ಡೆಪಾಸಿಟ್ ಮಾಡಿ ವಿಶ್ರಾಂತಿಗೆ ಹೋಗಿರುತ್ತಾರೆ ಎಂದು ಹೇಳಿ ಕೊಂಡಿದ್ದು; ದಿನಾಂಕ 30/04/2022 ರಂದು ಬೆಳಿಗ್ಗೆ 09:30 ಗಂಟೆಗೆ ಡಿಎಆರ್ ಹೆಡ್ ಕ್ವಾರ್ಟಸ್ ಗೆ ಕರ್ತವ್ಯಕ್ಕೆ ಬಂದು ಕಿಟ್ ಬಾಕ್ಸ್ ನಲ್ಲಿದ್ದ ಬ್ಯಾಗಿನಿಂದ ಸಮವಸ್ತ್ರ ಮತ್ತು ಬೆಟ್ ಶೀಟ ನ್ನು ಹೊರತೆಗೆದಾಗ, ಬೆಡ್ ಶೀಟ್ ನ ಅಡಿಯಿಂದ ನೋಟ್ ಬುಕ್ ನ ಒಂದು ಹಾಳೆ ಬಿದ್ದಿದ್ದು, ಅದನ್ನು ಹೆಚ್.ಸಿ ಗಣೇಶ್ ಓದಿದಾಗ ತನ್ನ ಸಾವಿಗೆ ಇಂತವರೇ ಕಾರಣ ಎಂದು ಬರೆದು ಅದರ ಕೊನೆಯಲ್ಲಿ ಎಹೆಚ್. ಸಿ 104 ರಾಜೇಶ್ ಕುಂದರ್ ಎಂದು ಬರೆದು ಸಹಿ ಮಾಡಲಾಗಿತ್ತು.ಹೆಚ್.ಸಿ. ಗಣೇಶ್ ರವರು ಈ ಡೆತ್ ನೋಟ್ ನ ಮಾಹಿತಿಯನ್ನು ಪೊಲೀಸ್ ಮೇಲಾಧಿಕಾರಿಗಳಿಗೆ ತಿಳಿಸಿ ಡೆತ್ ನೋಟ್ ಅನ್ನು ಉಡುಪಿ ನಗರ ಠಾಣೆಗೆ ಹಾಜರುಪಡಿಸಿ ದೂರನ್ನು ನೀಡಿರುತ್ತಾರೆ.
ಹೆಚ್.ಸಿ ರಾಜೇಶ್ ಕುಂದರ್ ಸಾವಿಗೆ ಹಿರಿಯ ಪೋಲಿಸ್ ಅಧಿಕಾರಿಗಳ ದೌರ್ಜನ್ಯ ವೇ ಕಾರಣವೆಂದು ಪ್ರಕರಣ ನಡೆದ ದಿನದಂದೇ ಕೆಲವರು ಆರೋಪಿಸಿದ್ದರು. ಆದರೂ ಆಕಸ್ಮಿಕ ಸಾವೆಂದು ದೂರು ದಾಖಲಿಸಿ ಕೊಳ್ಳಲಾಗಿತ್ತು.ಇದೀಗ ರಾಜೇಶ್ ಕುಂದರ್ ಬರೆದದ್ದೆನ್ನಲಾದ ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಡಿಎಆರ್ ಎಸಿಪಿ ಉಮೇಶ್, ಅಸ್ಪಕ್ , ಗಂಗೊಳ್ಳಿ ಠಾಣಾ ಪಿಎಸ್ಐ ನಂಜಾನಾಯ್ಕ ಹಾಗೂ ಇನ್ನೋರ್ವ ಹಿರಿಯ ಅಧಿಕಾರಿ ಕಾರಣ ಎಂದು ಬರೆದಿರುವ ಮೂಲಕ ಗಂಗೊಳ್ಳಿ ಯಲ್ಲಿ ಡಿಎಆರ್ ಪೋಲಿಸ್ ರ ನಡುವೆ ನಡೆದ ಹೊಡೆದಾಟದಿಂದ ಮೊದಲ್ಗೊಂಡು ರಾಜೇಶ್ ಕುಂದರ್ ಸಾವಿನ ತನಕ ಇದೊಂದು ಇಲಾಖೆಯ ಒಳಗಿನ ಒಳ ಜಗಳದಿಂದ ನೊಂದು ಮಾಡಿಕೊಂಡಿರುವ ಆತ್ಮಹತ್ಯೆ ಎಂದು ಸಂಶಯಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ .