Spread the love

ಕುಂದಾಪುರ: ಏಪ್ರಿಲ್ ೩೦ (ಹಾಯ್ ಉಡುಪಿ ನ್ಯೂಸ್) ತಮ್ಮ ಮಗನಿಗೆ ಮದ್ಯಪಾನ ಮಾಡಿಸ ಬೇಡ ಎಂದು ಬುದ್ಧಿ ಹೇಳಲು ಬಂದವರಿಗೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಕುಂದಾಪುರ ತಾಲೂಕು , ವಡೇರಹೋಬಳಿ ಗ್ರಾಮ,ಬರೆಕಟ್ಟು , ನಾವುಡ್ರಕೇರಿ ನಿವಾಸಿ ಶೋಭಾ (೪೫) ಇವರ ಮಗ ಪ್ರದೀಪ್ ಎಂಬಾತನಿಗೆ ಅಶೋಕರಾಜ್ ಎಂಬಾತನು ಮದ್ಯಪಾನ ಮಾಡಲು ಹಣ ಕೊಡುತ್ತಿದ್ದುದಲ್ಲದೇ ಮದ್ಯಪಾನ ಮಾಡಲು ಕರೆದುಕೊಂಡು ಹೋಗುತ್ತಿದ್ದು ಈ ವಿಚಾರವನ್ನು ಕೇಳಲು ಶೋಭಾ ಹಾಗೂ ಅವರ ಗಂಡ ಪ್ರಕಾಶರವರು ಕುಂದೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಅಶೋಕ ರಾಜ್ ಮನೆಗೆ ಹೋಗಿ ಅಲ್ಲಿದ್ದ ಅಶೋಕ್ ರಾಜ್ ನಲ್ಲಿ ಶೋಭಾರವರು ಇನ್ನು ಪ್ರದೀಪನನ್ನು ದುಶ್ಚಟಕ್ಕೆ ಕರೆದುಕೊಂಡು ಹೋಗಬೇಡಿ ಎಂಬುದಾಗಿ ಕೇಳಿಕೊಳ್ಳುತ್ತಿದ್ದಾಗ ಅಶೋಕರಾಜ್ ಏಕಾಏಕಿಯಾಗಿ ಶೋಭಾರವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ,ಬೆನ್ನಿಗೆ ಕೈಯಿಂದ ಹೊಡೆದು ನಂತರ ಮನೆಯಿಂದ ಹೊರಗೆ ಬಂದು  ಜೀವ ಬೆದರಿಕೆ ಹಾಕಿರುತ್ತಾನೆ ಎಂದು ದೂರಿದ್ದಾರೆ.ಅಶೋಕ ರಾಜ್ ಮಾಡಿದ ಹಲ್ಲೆಯಿಂದಾಗಿ ಶೋಭಾರವರು ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!