IMG-20240220-WA0038.jpg
Spread the love

ಹೆಬ್ರಿ: ದಿನಾಂಕ 11/01/2026 (ಹಾಯ್ ಉಡುಪಿ ನ್ಯೂಸ್) ಚಾರ ಗ್ರಾಮದಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಸ್ವಿಫ್ಟ್ ಕಾರಿನಲ್ಲಿ ಜಾನುವಾರುಗಳನ್ನು ಕದ್ದು ಸಾಗಿಸುತ್ತಿದ್ದಾಗ ವಾಹನ ಅಪಘಾತವಾಗಿ ಜಾನುವಾರು ಕಳ್ಳರು ವಾಹನವನ್ನು ಬಿಟ್ಟು ಪರಾರಿಯಾದ ಘಟನೆ ಹೆಬ್ರಿ ಚಾರದಲ್ಲಿ ನಡೆದಿದೆ.

ಹೆಬ್ರಿ ,ಚಾರ ಗ್ರಾಮ ನಿವಾಸಿ ಹರೀಶ್ (45) ಎಂಬವರು ದಿನಾಂಕ : 10-01-2026 ರಂದು ರಾತ್ರಿ ಮನೆಯಲ್ಲಿ ಇರುವಾಗ ಮನೆಯ ಎದುರು ರಸ್ತೆಯಲ್ಲಿ ವಾಹನ ಬಿದ್ದ ಶಬ್ದವಾಗಿದ್ದು  ಹರೀಶ್ ರವರು ಹಾಗೂ ಮನೆಯವರು ಹೊರಗೆ ಬಂದಾಗ ರಸ್ತೆಯ ಬದಿಯಲ್ಲಿ ಒಂದು ಕಾರು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿದ್ದು ಕಾರಿನ ಬಳಿಯಿಂದ ಓರ್ವ ವ್ಯಕ್ತಿ ಓಡುವುದು ಬೀದಿ ದೀಪ ಬೆಳಕಿನಲ್ಲಿ ಕಂಡಿದ್ದು ಬೊಬ್ಬೆ ಹಾಕಿದಾಗ ಹತ್ತಿರ ಮನೆಯವರಾದ ಸುಂದರ ಪೂಜಾರಿ, ಸಂತೋಷ ಶೆಟ್ಟಿಯವರು ಮತ್ತು ಅಕ್ಕಪಕ್ಕದವರು ಓಡಿ ಬಂದಿದ್ದು ಆತನು ಕತ್ತಲೆಯಲ್ಲಿ ಓಡಿ ತಪ್ಪಿಸಿ ಕೊಂಡಿರುತ್ತಾನೆ

ಅಲ್ಲಿಗೆ ಬಂದ ಸಂತೋಷ ಶೆಟ್ಟಿಯವರು ಇಬ್ಬರು ವ್ಯಕ್ತಿಗಳು ಓಡಿ ಹೋಗಿರುವುದನ್ನು ನೋಡಿರುವುದಾಗಿ ತಿಳಿಸಿದ್ದು ಚರಂಡಿಗೆ ಬಿದ್ದ ಕಾರು KA-03-MK-2505 ನೇ ನಂಬ್ರದ ಗ್ರೇ ಬಣ್ಣದ ಮಾರುತಿ ಸ್ವಿಪ್ಟ್‌ ಕಾರು ಆಗಿದ್ದು ಕಾರಿನ ಹಿಂಬದಿಯ ಸೀಟು ತೆಗೆದು ನೀಲಿ ಬಣ್ಣದ ಟಾರ್ಪಲ್‌ ಹಾಸಿ ಅದರ ಮೇಲೆ ಒಂದು ಬಿಳಿ ಬಣ್ಣದ ದನ ಹಾಗೂ ಒಂದು ಕಪ್ಪು ಬಣ್ಣದ ಮತ್ತು ಇನ್ನೊಂದು ಕಪ್ಪು ಬಳಿ ಬಣ್ಣದ ಗಂಡು ಜಾನುವಾರುಗಳನ್ನು ಕಾಲುಗಳನ್ನು ಹಗ್ಗದಿಂದ ಕಟ್ಟಿ ಒಂದರ ಮೇಲೆ ಒಂದನ್ನು ಹಾಕಿ ಹಿಂಸಾತ್ಮಕವಾಗಿ ತುಂಬಿಸಿರುವುದು ಕಂಡು ಬಂದಿದ್ದು ಯಾರೋ ಅಪರಿಚಿತ ವ್ಯಕ್ತಿಗಳು ದನಗಳನ್ನು ಎಲ್ಲಿಂದಲೋ ಕಳವು ಮಾಡಿ ವಧೆ ಮಾಡುವ ಉದ್ದೇಶದಿಂದ ಕಾರಿನಲ್ಲಿ ಜಾನುವಾರುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಕಾಲುಗಳನ್ನು ಹಗ್ಗದಿಂದ ಕಟ್ಟಿ ಮೇವು ಬಾಯಾರಿಕೆ ನೀಡದೆ ತುಂಬಿಸಿಕೊಂಡು ಹೋಗುವಾಗ ವಾಹನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿರಬಹುದು ಎಂದು ಹರೀಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ  ಕಲಂ: 303(2), 3(5) BNS‌ ಮತ್ತು ಕಲಂ: 11 (1)(ಡಿ) ಪ್ರಾಣಿ ಹಿಂಸಾ ಪ್ರತಿಭಂಧಕ ಕಾಯ್ದೆ ಮತ್ತು ಕಲಂ: 4,5,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿ ಬಂಧಕ ಮತ್ತು ಸಂರಕ್ಷಣ ಕಾಯ್ದೆ 2020 ರಂತೆ ಪ್ರಕರಣ ದಾಖಲಾಗಿದೆ.

error: No Copying!