ಉಡುಪಿ: ಏಪ್ರಿಲ್ ೩೦(ಹಾಯ್ ಉಡುಪಿ ನ್ಯೂಸ್) ಪೋಲಿಸ್ ಹೆಡ್ ಕಾನ್ಸ್ಟೇಬಲ್ ಓರ್ವರು ಕರ್ತವ್ಯ ದಲ್ಲಿರುವಾಗಲೇ ರೈಫಲ್ ನಿಂದ ಗುಂಡು ಸಿಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
ರಾಜೇಶ್ ಕುಂದರ್ (44 ) ರವರು ಉಡುಪಿ ಡಿ.ಎ.ಆರ್ ಘಟಕದಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 29/04/2022 ರಂದು ಬೆಳಿಗ್ಗೆ 10:00 ಗಂಟೆ ಯ ಸಮಯದಲ್ಲಿ ಆದಿಉಡುಪಿ ಶಾಲೆಯಲ್ಲಿ ಗಾರ್ಡ್ ಕರ್ತವ್ಯದಲ್ಲಿರುವಾಗ, ಅವರ ಬಳಿಯಿದ್ದ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿ ರಾಜೇಶ್ ಕುಂದರ್ ರವರ ಕುತ್ತಿಗೆ ಭಾಗಕ್ಕೆ ಸಿಡಿದು ತಲೆ ಒಡೆದು ಮೃತಪಟ್ಟಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ರಾಜೇಶ್ ಕುಂದರ್ ಅವರ ಸಾವಿಗೆ ಹಿರಿಯ ಅಧಿಕಾರಿಗಳ ದೌರ್ಜನ್ಯ ಕಾರಣವೆಂದು ಹೇಳಲಾಗುತ್ತಿದ್ದು; ಇದು ಆಕಸ್ಮಿಕ ಸಾವೋ ಅಥವಾ ಆತ್ಮಹತ್ಯೆಯೋ ಎಂದು ಪೋಲಿಸ್ ತನಿಖೆಯಿಂದ ತಿಳಿಯ ಬೇಕಾಗಿದ್ದು ಮ್ರತ ಪೊಲೀಸ್ ಸಿಬ್ಬಂದಿ ರಾಜೇಶ್ ಕುಂದರ್ ಗೆ ನ್ಯಾಯ ಸಿಗಬೇಕಾಗಿದೆ.