ಇಂದ್ರಾಳಿ: ಏಪ್ರಿಲ್ ೨೯(ಹಾಯ್ ಉಡುಪಿ ನ್ಯೂಸ್) ಇಲ್ಲಿನ ರೈಲ್ವೇ ನಿಲ್ದಾಣದ ಬಳಿಯ ಶ್ರೀ ಜಯ ಪೂಜಾರಿ ಮತ್ತು ಶ್ರೀಮತಿ ಸಂಕ್ರಿ ಪೂಜಾರ್ತಿ ಕುಟುಂಬಿಕರು ಹಾಗೂ ಸಾರ್ವಜನಿಕರು ಆರಾಧಿಸಿಕೊಂಡು ಬಂದಿರುವ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ವಾರ್ಷಿಕ ಗಣಹೋಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಇಂದು ಸಂಪನ್ನಗೊಂಡಿತು.