ಉಡುಪಿ: ದಿನಾಂಕ 07/01/2026 (ಹಾಯ್ ಉಡುಪಿ ನ್ಯೂಸ್) ಕರಾವಳಿ ಬೈಪಾಸ್ ಕಡೆಯಿಂದ ಅಂಬಲಪಾಡಿ ಕಡೆಗೆ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಲಾರಿಯನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಗಂಗಪ್ಪ ಎಸ್ ಅವರು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಗಂಗಪ್ಪ ಎಸ್(58) ಅವರು ದಿನಾಂಕ :06-01-2026 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ಅಂಬಲಪಾಡಿ ಗ್ರಾಮದ ಕಾಳಿಕಾಂಬ ನಗರಕ್ಕೆ ಹೋಗುವ ರಸ್ತೆ ಬಳಿ ಕರಾವಳಿ ಬೈಪಾಸ್ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಅಂಬಲಪಾಡಿ ಕಡೆಗೆ ಬರುತ್ತಿದ್ದ KA-51-AC-7536 ನೋಂದಣಿ ಸಂಖ್ಯೆಯ ಟಿಪ್ಪರ ನ್ನು ನಿಲ್ಲಿಸಿ ಚಾಲಕನನ್ನು ವಿಚಾರಣೆ ನಡೆಸಿದಾಗ ಆತನು ತನ್ನ ಹೆಸರು ಗೈಬೂ ಸಾಬಾ ನಬೀಸಬಾ ನದಾಪಾ ಎಂಬುದಾಗಿಯೂ ತಾನು ಕಾಪುವಿನ ಮರಿಯಪ್ಪ ಇವರ KA-51-AC-7536 ನೋಂದಣಿ ಸಂಖ್ಯೆಯ ಟಿಪ್ಪರ್ ಗೆ ಚಾಲಕನಾಗಿ ಕೆಲಸಮಾಡಿಕೊಂಡಿರುತ್ತೇನೆ ಎಂದು ಹೇಳಿರುತ್ತಾನೆ.
ಟಿಪ್ಪರ ನ್ನು ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ 450 ಕೆಂಪು ಕಲ್ಲನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಕೆಂಪು ಕಲ್ಲು ಸಾಗಾಟದ ಬಗ್ಗೆ ಟಿಪ್ಪರ್ ಚಾಲಕನ ಬಳಿ ವಿಚಾರಿಸಿದಾಗ ಆತನು ಟಿಪ್ಪರ್ ಮಾಲಕ ಮರಿಯಪ್ಪ ಎಂಬುವವರ ಸೂಚನೆಯಂತೆ ಕೂಲಿ ಆಳುಗಳ ಸಹಾಯದಿಂದ ಕುಂದಾಪುರ ಬಳಿಯ ಹೆಮ್ಮಾಡಿ ಬಳಿ ಮನೋಜ್ ಎಂಬುವವರ ಕೆಂಪುಕಲ್ಲನ್ನು ಟಿಪ್ಪರ್ ನಲ್ಲಿ ಲೋಡ್ ಮಾಡಿಕೊಂಡು ಬಂದಿರುವುದಾಗಿ ತಿಳಿಸಿರುತ್ತಾನೆ.
ಟಿಪ್ಪರ್ ಚಾಲಕನ ಬಳಿ ಸಾಗಾಟ ಮಾಡಲು ಪರವಾನಿಗೆಯನ್ನು ಹೊಂದಿದ್ದರ ಬಗ್ಗೆ ವಿಚಾರಿಸಿದಾಗ ತಾನು ಯಾವುದೇ ಪರವಾನಿಗೆಯನ್ನು ಹೊಂದಿರುವುದಿಲ್ಲ ಎಂದು ಹೇಳಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 303(2) ಜೊತಗೆ 3(5) BNS, ಕಲಂ: 4(1-A),21(4) MMRD act ರಂತೆ ಪ್ರಕರಣ ದಾಖಲಾಗಿದೆ.
