ಉಡುಪಿ: ದಿನಾಂಕ:07-01-2026(ಹಾಯ್ ಉಡುಪಿ ನ್ಯೂಸ್) ರೋಡ್ ಅಥಾರಿಟಿ ನಿರ್ಧಾರ ಪ್ರಕಾರ 6 ಚಕ್ರ ಮತ್ತು ಅದಕ್ಕಿಂತ ಜಾಸ್ತಿ ಇರುವಂತಹ MMRD ಕಾಯ್ದೆ ಅಡಿಯಲ್ಲಿ ಬರುವ (ಕೆಂಪು ಕಲ್ಲು,ಹೊಯ್ಗೆ, ಎಂ ಸ್ಯಾಂಡ್ ಇತ್ಯಾದಿ) ಸಾಗಾಟ ಮಾಡುವಂತಹ ವಾಹನಗಳು ಕಡ್ಡಾಯವಾಗಿ ಸ್ಪೀಡ್ ಗವರ್ನರ್ (60 k.m ಪರ್ ಹವರ್)ಅಳವಡಿಸ ಬೇಕು ಎಂದು ಆದೇಶ ಹೊರಡಿಸಲಾಗಿದೆ.
ಮುಂದಿನ 10 ದಿನಗಳ ಒಳಗಾಗಿ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸದಿದ್ದಲ್ಲಿ ಜಿಲ್ಲೆಯಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ.ನಿಯಮ ಉಲ್ಲಂಘಿಸಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
