images-2.jpeg
Spread the love

ದಿನಾಂಕ:07-01-2026(ಹಾಯ್ ಉಡುಪಿ ನ್ಯೂಸ್)

ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕಿಡಿಗೇಡಿಯೋರ್ವ ಮಹಿಳೆಯರು ಸ್ನಾನ ಮಾಡುವಾಗ ಸ್ನಾನಗೃಹ ಇಣುಕಿ ಓಡಿಹೋಗುವ ಘಟನೆ ಕಳೆದೆರಡು ದಿನಗಳಿಂದ ನಡೆಯುತ್ತಿದೆ.

ಇಲ್ಲಿನ ಪಾಂಡೇಶ್ವರ ನಿರಾಡಿಜಡ್ಡು ಪ್ರದೇಶದಲ್ಲಿ ಸೋಮವಾರ ಒಂದು ಮನೆಯಲ್ಲಿ ಸಂಜೆ ಹೊತ್ತಿನಲ್ಲಿ ಮಹಿಳೆಯೋರ್ವರು ಸ್ನಾನಗೈಯುತ್ತಿರುವ ಸಂದರ್ಭದಲ್ಲಿ ಸ್ನಾನಗೃಹದ ಹಂಚು ತೆಗೆದು ಮೊಬೈಲ್ ಮೂಲಕ ವಿಡಿಯೋ ತೆಗೆಯುವ ಸಂದರ್ಭದಲ್ಲಿ ಆಕೆ ಕಿರುಚಿದ ಕಾರಣ ಆತ ಅಲ್ಲಿಂದ ಓಡಿ ಹೋಗಿದ್ದು ಈ ಪ್ರಕರಣ ಕೋಟ ಪೊಲೀಸ್‌ ಠಾಣೆ ಮೆಟ್ಟಿಲೆರಿದೆ .

ಅದಾದ ಬಳಿಕ ಮಂಗಳವಾರ ಪಾಂಡೇಶ್ವರ ಮುಖ್ಯ ರಸ್ತೆ ಸಮೀಪವಿರುವ ಮನೆಯೊಂದರ ಮಹಿಳೆ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿಯೂ  ಕಿಟಕಿಯಲ್ಲಿ ಇಣುಕಿ ಪರಾರಿಯಾಗಿದ್ದಾ‌ನೆ ಆತನಿಗಾಗಿ ಕೋಟ ಪೋಲಿಸರು, ಗ್ರಾಮಸ್ಥರು ಹುಡುಕಾಟ ನಡೆಸಿದ್ದರು ಎನ್ನಲಾಗಿದೆ.

ಪಾಂಡೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣವನ್ನು ಕೋಟ ಪೋಲಿಸರು ಶೀಘ್ರದಲ್ಲಿ ಹಿಡಿದು ಬಂದಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದು ಮನೆಯ ಸುತ್ತಮುತ್ತ ಭಯದ ವಾತಾವರಣ ಸೃಷ್ಟಿಯಾಗಿದೆ ಎನ್ನಲಾಗಿದೆ .

ಈ  ಕುರಿತು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶೀಘ್ರದಲ್ಲಿ ಆತನಿಗಾಗಿ ಪೋಲಿಸ್ ಇಲಾಖೆ ಬಲೆ ಬೀಸಲಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

error: No Copying!