ಕರ್ಜೆ : ಏಪ್ರಿಲ್ ೨೯(ಹಾಯ್ ಉಡುಪಿ ನ್ಯೂಸ್) ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಕಾಮಗಾರಿಗೆ ತಡೆ ಒಡ್ಡಲು ಬಂದವರು ನಕಲಿ ಪ್ರತಿಭಟನಾಕಾರರು ಎಂದು ಗ್ರಾಮಸ್ಥರು ಜೊತೆಯಾಗಿ ಪ್ರತಿಭಟನೆ ನಡೆಸಿ ರಸ್ತೆ ಕಾಮಗಾರಿಗಾಗಿ ಒತ್ತಾಯಿಸಿದ ಘಟನೆ ನಡೆದಿದೆ.
ಕರ್ಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆ0ಕಬೈಲು ಪೆರ್ಡೂರು ಸಂಪರ್ಕ ರಸ್ತೆ, ಕರ್ಜೆ ಮಹಾಲಿಂಗೇಶ್ವರ ಹೌಸ್ ಸೈಟ್ ಹಾಗೂ ಪ. ಪಂಗಡ ಮನೆ ಮನೆ ಸಂಪರ್ಕ ಮಾಡಲು TSP ಯೋಜನೆಯಲ್ಲಿ ಸರಕಾರದಿಂದ ಎರಡು ಕೋಟಿ ಮಂಜೂರು ಆಗಿದ್ದು ಅದರ ಕೆಲಸ ಭರದಿಂದ ನಡೆಯುತ್ತಿರುವ ಸಂದರ್ಭದಲ್ಲಿ ರಸ್ತೆ ಕಾಮಗಾರಿ ಅಡ್ಡಿಪಡಿಸಲು ಬೇರೆ ಊರಿನಿಂದ ಜನರನ್ನು ಪ್ರತಿಭಟನೆಯ ನಾಟಕವಾಡಲು ಕರೆದು ಕೊಂಡು ಬಂದಿದ್ದಾರೆ ಎಂದು ಜಯಕರ ನಾಯ್ಕ ಸಂತೇಕಟ್ಟೆ ಮತ್ತು ಶೇಖರ ಹಾವಂಜೆ ರವರ ವಿರುದ್ಧ ಅದೇ ಊರಿನ ಹೊಸೂರು ಗ್ರಾಮದ ಗ್ರಾಮಸ್ಥರು ಪಕ್ಷ ಬೇಧ ಮರೆತು ಪ್ರತಿಭಟಿಸಿದ್ದಾರೆ.ಈ ಸಂದರ್ಭ ದಲ್ಲಿ ಜಿಲ್ಲಾ ಮರಾಠಿ ಸಂಘದ ಅಧ್ಯಕ್ಷರಾದ ಅನಂತ ನಾಯ್ಕ ಸರಳಬೆಟ್ಟು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ BN ಶಂಕರ ಪೂಜಾರಿ, ಬಾರತೀಯ ಜನತಾ ಪಕ್ಷದ ಗ್ರಾಮಾಂತರ ಅಧ್ಯಕ್ಷರಾದ ವೀಣಾ ನಾಯ್ಕ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಕರ್ಜೆ ಯವರು ಸುಳ್ಳು ಹಾಗು ನಾಟಕದ ಪ್ರತಿಭಟನೆ ಮಾಡಿ ಕಾಮಗಾರಿಗೆ ಅಡ್ಡಿ ಪಡಿಸುತ್ತಿರುವ ಬಗ್ಗೆ ತೀವ್ರ ವಾಗಿ ಖಂಡಿಸಿದರು. ಈ ಸಂದರ್ಭದಲ್ಲಿ ಕನ್ನಾರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಧನಂಜಯ ಅಮೀನ್, ಪಂಚಾಯತ್ ಸರ್ವ ಸದಸ್ಯರು, ಸಿಂಡಿಕೇಟ್ ರೈತಸೇವಾ ಸಹಕಾರಿ ಬ್ಯಾಂಕ್ ಕೊಕ್ಕರ್ಣೆ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಮೈರ್ಮಾಡಿ , ಕರ್ಜೆ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷರಾದ ಕಿರಣ್ ಶೆಟ್ಟಿ, ಬಿ ಜೆ ಪಿ ಎಸ್ ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಉಮೇಶ್ ನಾಯ್ಕ್ ಚೇರ್ಕಾಡಿ, ಜಿಲ್ಲಾ ಎಸ್ ಟಿ ಮೋರ್ಚಾದ ಅಧ್ಯಕ್ಷರಾದ ನಿತ್ಯಾನಂದ್ ನಾಯ್ಕ್ ಉಪಸ್ಥಿತರಿದ್ದರು . ಇದೇ ಸಂದರ್ಭದಲ್ಲಿ ಪತ್ರಿಕಾ ಮಾಧ್ಯಮಗಳಿಗೆ ಅಲ್ಲಿನ ಸ್ಥಿತಿ ಗತಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು . ಪರಿಶಿಷ್ಟ ಪಂಗಡದ ಜನರು ವಾಸ ಮಾಡುವ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ನೀಡಲಾಯಿತು . ಗ್ರಾಮಸ್ಥರು ಅನಾವಶ್ಯವಾಗಿ ದುರುದ್ದೇಶ ಪೂರ್ವಕವಾಗಿ ಕಾಮಗಾರಿಗೆ ಅಡ್ಡಿಪಡಿಸಿದ ದುರ್ಷ್ಕರ್ಮಿಗಳ ವಿರುದ್ಧ ಹರಿಹಾಯ್ದರು ಹಾಗೂ ಸಂಬಂಧ ಪಟ್ಟ ಇಲಾಖೆಗಳಿಗೆ ಮನವಿಯನ್ನು ನೀಡಿ ಶೀಘ್ರ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಪಟ್ಟು ಹಿಡಿದರು. ಹಾಗೂ ಸರಕಾರದಿಂದ ಅನುದಾನವನ್ನು ಒದಗಿಸಿದ ಶಾಸಕರಾದ ರಘುಪತಿ ಭಟ್ ಹಾಗೂ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸರ್ವರೂ ಕೃತಜ್ಞತೆಗಳನ್ನು ಸಲ್ಲಿಸಿದರು.